ಕರಾವಳಿ

ಮೂಲರಪಟ್ಣ ಮೌಲಾನ ಅಝಾದ್ ಮಾದರಿ ಶಾಲೆಯ SSLC ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ

Oplus_131072


ಪುತ್ತೂರು: ಜಿ.ಎಚ್.ಎಮ್ ಫೌಂಡೇಶನ್ ಮೂಲರಪಟ್ನ ಇದರ ವತಿಯಿಂದ SSLC ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ತರಬೇತಿ ಶಿಬಿರ ಮೂಲರಪಟ್ಣ ಮೌಲಾನ ಅಝಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ಶಾಲಿ ಎಮ್ ಎಸ್ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಂಝ ಗುತ್ತು, ಗೌರವ ಸಲಹೆಗಾರ ಎಮ್.ಬಿ ಅಶ್ರಫ್, ಮೌಲಾನ ಅಝಾದ್ ಮಾದರಿ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ಭರತ್, ಅಬ್ದುಲ್ ಸಮದ್ ಅರಳ, ಎಮ್ ಪಿ ಅಬ್ದುಲ್ ಜಬ್ಬಾರ್, ಸಂಸ್ಥೆಯ ಸದಸ್ಯರಾದ ಶಾರೂಕ್ ಎಂ ಬಿ, ಅಬ್ದುಲ್ ರಶೀದ್ ಎಂ ಬಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಬ್ದುಲ್ ಖಾದರ್ ನಾವೂರು ವಿಧ್ಯಾರ್ಥಿಗಳ ಹಾಗೂ ಪೋಷಕರ ಜೊತೆ ನೇರ ಸಂವಾದ ಕಾರ್ಯಕ್ರಮ ನಡೆಸಿ ಬಹಳ ಅರ್ಥಗರ್ಭಿತ ಮಾತುಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ವಿವರಿಸಿದರು.


ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶಲೀಲ ವಿಟ್ಲ ಇವರು ವಿದ್ಯಾರ್ಥಿಗಳ ಕಲಿಕೆಯ ಬೆಳವಣಿಗೆಯನ್ನು ಉತ್ತೇಜಿಸಲು ಪಠ್ಯವಾರು ವಿಷಯವನ್ನು ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರರಿಗೆ ಮನದಟ್ಟು ಮಾಡಿಕೊಟ್ಟರು. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರರಿಗೆ ಮಾದಕ ದ್ರವ್ಯ ಮುಕ್ತ ಸಮಾಜ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣದ ಕುರಿತು ಮಾಹಿತಿ ನೀಡಲು ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಆಗಮಿಸಿ ವಿಧ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ನೀಡಿ ಮನದಟ್ಟು ಮಾಡಿಕೊಟ್ಟರು.


ವಿದ್ಯಾ ರ್ಥಿಗಳಾದ ಫಾತಿಮ ಮೆಹತಾಝ್ ಸ್ವಾಗತಿಸಿದರು.
ಆಯಿಷ ಅಷ್ಪಿಯಾ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾಭಿವೃಧ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಬ್ದುಲ್ ಸಮದ್ ಅರಳ ಇವರ ಸೇವೆಯನ್ನು ಗುರುತಿಸಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!