ಕ್ರೈಂಜಿಲ್ಲೆ

ಗೀಸರ್‌ನಿಂದ ವಿಷಾನಿಲ ಸೋರಿಕೆ: ತಾಯಿ, ಮಗ ಮೃತ್ಯು

ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆದಿದೆ.

ಶೋಭಾ (40.ವ), ಪುತ್ರ ದಿಲೀಪ್ (16.ವ) ಮೃತಪಟ್ಟವರು. ಗೀಸರ್‌ ಆನ್ ಮಾಡಿ ಮನೆಯ ಸದಸ್ಯರು ಮರೆತು ಹೋಗಿದ್ದಾರೆ ಎನ್ನಲಾಗುತ್ತಿದ್ದು ಬಾಗಿಲು, ಕಿಟಕಿ ಮುಚ್ಚಿದ್ದರಿಂದ ಮನೆಯೊಳಗೆ ವಿಷಾನಿಲ ಆವರಿಸಿಕೊಂಡು ಶ್ವಾಸಕೋಶಕ್ಕೆ ವಿಷ ಹೋಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!