ಪುತ್ತೂರು ಎಸ್‌ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ ಪರವಾಗಿ ನಾಮ ಪತ್ರ ಸಲ್ಲಿಕೆ-ಮೆರವಣಿಗೆ
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಪ್ರಸ್ತುತ ಜೈಲಿನಲ್ಲಿರುವ ಶಾಫಿ ಬೆಳ್ಳಾರೆಯವರ ನಾಮ ಪತ್ರ ಸಲ್ಲಿಕೆ ಎ.19ರಂದು ನಡೆಯಿತು. ಎಪಿಎಂಸಿ ಕಚೇರಿ ಬಳಿಯಿರುವ ಪಕ್ಷದ ಕಚೇರಿ ಬಳಿಯಿಂದ ನೂರಾರು ಮಂದಿ ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ತೆರಳಿದ ನಾಯಕರು ಶಾಫಿ ಬೆಳ್ಳಾರೆ ಪರವಾಗಿ ನಾಮಪತ್ರ ಸಲ್ಲಿಸಿದರು.

ಎಸ್‌ಡಿಪಿಐ ಉಳ್ಳಾಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡಿ ನಮ್ಮ ನಾಯಕ ಅಮಾಯಕ ಶಾಫಿ ಬೆಳ್ಳಾರೆಯವರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸಿ ಜೈಲಿಗೆ ಹಾಕಿದ್ದು ಮುಂದಿನ ದಿನಗಳಲ್ಲಿ ಶಾಫಿ ಬೆಳ್ಳಾರೆಯವರಿಗೆ ನ್ಯಾಯ ಸಿಗಲಿದ್ದು ಅವರು ಮತ್ತೊಮ್ಮೆ ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ, ಈ ಬಾರಿ ಶಾಫಿ ಬೆಳ್ಳಾರೆಯವರಿಗೆ ತಾವೆಲ್ಲರೂ ಮತ ನೀಡಿ ಗೆಲ್ಲಿಸಬೇಕು ಎಂದು ಅವರು ಹೇಳಿದರು.
ಎಸ್‌ಡಿಪಿಐ ಮುಖಂಡ ಅಲ್ಫಾನ್ಸ್ ಫ್ರಾಂಕೋ ಮಾತನಾಡಿ ನಮ್ಮ ಪಕ್ಷ ಭಯ ಮುಕ್ತ ಸ್ವಾತಂತ್ರ್ಯ, ಹಸಿವು ಮುಕ್ತ ಸ್ವಾತಂತ್ರ್ಯ ಎಂಬ ಘೋಷಣೆಯಡಿ ಸಾಗುತ್ತಿರುವ ಎಸ್‌ಡಿಪಿಐಯನ್ನು ಜನತೆ ಬೆಂಬಲಿಸಬೇಕು ಎಂದು ಹೇಳಿದರು.
ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಪ ಅಮಾಯಕ ಶಾಫಿ ಬೆಳ್ಳಾರೆಯನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಎಸ್‌ಡಿಪಿಐ ಜಿಲ್ಲಾ ಮುಖಂಡ, ರೈತ ಮುಖಂಡರೂ ಆಗಿರುವ ವಿಕ್ಟರ್ ಮಾರ್ಟಿಸ್ ಮಾತನಾಡಿ ಅಮಾಯಕ ಶಾಫಿ ಬೆಳ್ಳಾರೆ ನಮ್ಮ ಅಭ್ಯರ್ಥಿಯಾಗಿದ್ದು ಅವರು ಒಂದಲ್ಲ ಒಂದು ದಿನ ಈ ಸಮಾಜದ ಬಹು ದೊಡ್ಡ ನಾಯಕರಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು.
ಎಸ್‌ಡಿಪಿಐ ನಾಯಕಿ ನಸ್ರಿಯಾ ಬೆಳ್ಳಾರೆ ಮಾತನಾಡಿ ಬೆಳ್ಳಾರೆಯಲ್ಲಿ ಸಂಸದರ ಕಾರು ಅಲ್ಲಾಡಿಸಿದಾಗ ಅವರನ್ನು ಸಮಾಧಾನ ಪಡಿಸಲು ಅಮಾಯಕ ಶಾಫಿ ಬೆಳ್ಳಾರೆಯವರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಇದು ಅನ್ಯಾಯದ ಪರಮಾವಧಿ, ಇಂತಹ ಅನ್ಯಾಯ, ಅನೀತಿ ವಿರುದ್ಧ ಜನತೆ ಜಾಗೃತರಾಗಬೇಕು ಎಂದು ಹೇಳಿದರು.
ಎಸ್‌ಡಿಪಿಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಮುಖಂಡರಾದ ರಿಯಾಝ್ ಕಡಂಬು, ಮೂನಿಶ್ ಅಲಿ ಬಂಟ್ವಾಳ, ಶಾಕಿರ್ ಅಳಕೆಮಜಲು, ಕಲಾಂ ಸುಳ್ಯ, ನವಾಝ್ ಕಟ್ಟೆ, ಆಸಿಫ್ ಕೋಟೆಬಾಗಿಲು, ಅಕ್ಬರ್ ಬೆಳ್ತಂಗಡಿ, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸಿದ್ದಿಕ್ ಕೆ.ಎ, ಬಾಬು ಸವಣೂರು, ಹಮೀದ್ ಸಾಲ್ಮರ, ಎಂ.ಎ ರಫೀಕ್ ಸವಣೂರು, ಬಾತಿಷ ಬಡಕ್ಕೋಡಿ, ಯಹಿಯಾ ಕೂರ್ನಡ್ಕ, ಸಿರಾಜ್, ಉಮ್ಮರ್ ಕೂರ್ನಡ್ಕ, ಸಲೀಂ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.