ಕರಾವಳಿರಾಜ್ಯ

ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿದ ಪುತ್ತೂರಿನ ಇಬ್ರಾಹಿಂ ಖಲೀಲ್ ಪ್ರಕಟಿಸಿದ್ದ ವಿಶೇಷ ವರದಿ

ಪುತ್ತೂರು: ಆಸಿಡ್ ದಾಳಿಗೊಳಗಾದ ಮಹಿಳೆಯರ ಯಾತನೆ ಬಗ್ಗೆ ಪತ್ರಕರ್ತ ಪುತ್ತೂರಿನ ಇಬ್ರಾಹಿಂ ಖಲೀಲ್ ಪ್ರಕಟಿಸಿದ್ದ ವಿಶೇಷ ವರದಿ ಸದನದಲ್ಲಿ ಪ್ರತಿಧ್ವನಿಸಿದ್ದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ವಿಶೇಷ ವರದಿಯನ್ನು ಉಲ್ಲೇಖಿಸಿ ಸಂತ್ರಸ್ತರಿಗೆ ನಿವೇಶನ ನೀಡಲು ಆಗ್ರಹಿಸಿದ್ದಾರೆ.


ಆಸಿಡ್ ದಾಳಿಗೊಳಗಾದ ಮಹಿಳೆಯರ ಯಾತನೆ ಬಗ್ಗೆ ಪತ್ರಕರ್ತ ಪುತ್ತೂರು ಬನ್ನೂರು ನಿವಾಸಿಯಾಗಿದ್ದು ಪ್ರಸ್ತುತ ವಾರ್ತಾಭಾರತಿ ಬೆಂಗಳೂರು ವರದಿಗಾರರಾಗಿರುವ ಇಬ್ರಾಹಿಂ ಖಲೀಲ್ ಅವರು ವಿಸ್ತೃತವಾಗಿ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿದ್ದರು. ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ‘ಆಸಿಡ್ ದಾಳಿಗೊಳಗಾದ ಮಹಿಳೆಯರು ಸರಿಯಾದ ಸೂರಿಲ್ಲದೇ ಇರುವುದರಿಂದ ಸಂಕಷ್ಟದಲ್ಲಿದ್ದು ಕಳೆದ 20 ವರ್ಷಗಳಿಂದ ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಮಾತ್ರವಲ್ಲದೇ ಅವರಿಗೆ ಸೂಕ್ತ ಚಿಕಿತ್ಸೆ ಸಿಗದೇ ಅವರ ಆರೋಗ್ಯವೂ ಹದಗೆಡುತ್ತಿದೆ, ಸರಕಾರ ಅವರಿಗೆ ನೀಡುತ್ತಿರುವ ಪಿಂಚಣಿ ಯೋಜನೆಯನ್ನು ಹೆಚ್ಚಿಸಬೇಕು, ನಿವೇಶನ ನೀಡಬೇಕು ಮತ್ತು ಅವರ ಜೀವನ ಸುಧಾರಣೆಗಾಗಿ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರಕಾರವನ್ನು ಬಿ.ಕೆ ಹರಿಪ್ರಸಾದ್ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!