ಪುತ್ತೂರು ಸಿಟಿ ಸೆಂಟರ್ ಬಿಲ್ಡಿಂಗ್‌ನಲ್ಲಿ ಹೋಟೆಲ್ ‘ರೋಯಲ್ ಮ್ಯಾಕ್ಸ್’ ಶುಭಾರಂಭ
ಪುತ್ತೂರು: ಮಾಂಸಹಾರ ಮತ್ತು ಸಸ್ಯಹಾರ ಖಾದ್ಯಗಳ ‘ಹೋಟೆಲ್ ರೋಯಲ್ ಮ್ಯಾಕ್ಸ್’ ಇಲ್ಲಿನ ಮುಖ್ಯ ರಸ್ತೆಯ ಜಿ.ಎಲ್ ಮಾಲ್ ಎದುರುಗಡೆ ಇರುವ ಸಿಟಿ ಸೆಂಟರ್ ಬಿಲ್ಡಿಂಗ್‌ನಲ್ಲಿ ಆ.11ರಂದು ಶುಭಾರಂಭಗೊಂಡಿತು. ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ದುವಾಶೀರ್ವಚನ ನೀಡಿದರು. ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ಬಾಸ್ ಮದನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೂಸಾ ಕನಕಮಜಲು ರಿಬ್ಬನ್ ಕತ್ತರಿಸಿ ಹೋಟೆಲ್‌ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಮಕ್ಕಳ ತಜ್ಞ ಡಾ.ಶ್ರೀಕಾಂತ್, ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಮಾಜಿ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ನಗರಸಭಾ ಉಪಾಧ್ಯಕ್ಷ ಬಾಲಚಂದ್ರ, ಸದಸ್ಯ ರಿಯಾಝ್ ಪರ್ಲಡ್ಕ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಪ್ರ.ಕಾರ್ಯದರ್ಶಿ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಮೈದಾನಿಮೂಲೆ ಮಸೀದಿಯ ಖತೀಬ್ ಅಬ್ದುಲ್ ರಝಾಕ್ ಖಾಸಿಮಿ, ಕರ್ನಾಟಕ ಭಾವೈಕ್ಯ ಪರಿಷತ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ಅಝೀಝ್ ಝುಹ್‌ರಿ ಪುಣಚ, ಮೊದಲಾದವರು ಮಾತನಾಡಿ ಶುಭ ಹಾರೈಸಿದರು.
ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಫೀಕ್ ರೋಯಲ್, ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ
ಅಶ್ರಫ್ ಕಲ್ಲೇಗ, ಎಸ್‌ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಉಪಾಧ್ಯಕ್ಷ ಹಮೀದ್ ಸಾಲ್ಮರ, ಗುತ್ತಿಗೆದಾರ ಜುನೈದ್ ಪಿ.ಜಿ, ಉದ್ಯಮಿಗಳಾದ ಹಮೀದ್ ಮಾಡಾವು ಹಾಗೂ ಮಜೀದ್ ಮಾಡಾವು, ಅಲ್ ಅಮಾನ್ ಚಿಕನ್ ಪುತ್ತೂರು ಇದರ ಮಾಲಕ ಇರ್ಷಾದ್ ಸರ್ವೆ ಉಪಸ್ಥಿತರಿದ್ದರು.
ಹೋಟೆಲ್ ರೋಯಲ್ ಮ್ಯಾಕ್ಸ್‌ನ ಮಾಲಕ ಲತೀಫ್ ಪುಣಚ ಅತಿಥಿಗಳನ್ನು ಸತ್ಕರಿಸಿದರು. ರಿಯಾಝ್ ಬಳಕ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.