ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ, ಗಾಯಾಳು ಮಹಿಳೆ ಮೃತ್ಯು
ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ 2 ದಿನಗಳ ಹಿಂದೆ ಢಿಕ್ಕಿ ಸಂಭವಿಸಿ, ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯ ಪರ್ಲಡ್ಕ ನಿವಾಸಿ ಸೈಯದ್ ಆಲಂ(64) ಎಂಬವರ ಪತ್ನಿ ಅಫ್ಸಾ (54) ಮೃತಪಟ್ಟ ಮಹಿಳೆ.
ಶುಕ್ರವಾರ ರಾತ್ರಿ ಪೇಟೆಯ ಕಡೆಗೆ ಸಂಚರಿಸುತ್ತಿದ್ದ ಸಂದರ್ಭ ಅವರ ಸ್ಕೂಟರ್ ಮತ್ತು ಮುಂಭಾಗದಿಂದ ಬರುತ್ತಿದ್ದ ಇನ್ನೊಂದು ಸ್ಕೂಟರ್ ಪರ್ಲಡ್ಕ ಜಂಕ್ಷನ್ನಲ್ಲಿ ಪರಸ್ಪರ ಢಿಕ್ಕಿಯಾಗಿತ್ತು. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಸೈಯ್ಯದ್ ಆಲಂ ಮತ್ತು ಅಫ್ಸಾ ಹಾಗೂ ಇನ್ನೊಂದು ಸ್ಕೂಟರ್ನಲ್ಲಿದ್ದ ಸವಾರ ಮಹಮ್ಮದ್ ಮುಝಮ್ಮಿಲ್ (19) ಮತ್ತು ಸಹ ಸವಾರ ಮಹಮ್ಮದ್ ನವೀದ್ (18) ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದರು ಎನ್ನಲಾಗಿದೆ.
ಗಂಭೀರ ಗಾಯಗೊಂಡಿದ್ದ ಸೈಯದ್ ಆಲಂ, ಅಫ್ಸಾ ಮತ್ತು ಮುಹಮದ್ ನವೀದ್ ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಫ್ಸಾ ಮೃತಪಟ್ಟಿದ್ದಾರೆ. ಸೈಯದ್ ಆಲಂ ಮತ್ತು ಮುಹಮ್ಮದ್ ನವೀದ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತಿ, ಮೂವರು ಪುತ್ರರು ಹಾಗೂ ಓರ್ವ ಪತ್ರಿಯನ್ನು ಅಗಲಿದ್ದಾರೆ