ಕರಾವಳಿಕ್ರೈಂ

ಧರ್ಮಸ್ಥಳ: ದೂರುದಾರ ಗುರುತಿಸಿದ 2 ಮತ್ತು 3ನೇ ಸ್ಥಳದಲ್ಲೂ ಸಿಗದ ಕಳೇಬರ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ಮುಂದುವರಿದಿದೆ. ನೇತ್ರಾವತಿ ಸ್ನಾನಘಟ್ಟ ಸಮೀಪದ ಕಾಡಿನಲ್ಲಿ ದೂರುದಾರ ಹಲವು ಶವ ಹೂತಿಟ್ಟ ಸ್ಥಳಗಳನ್ನು ಗುರುತಿಸಿದ್ದಾನೆ. ಈ ಪೈಕಿ ಮೊದಲ ಸ್ಥಳವನ್ನು  ಜು.29ರಂದು ಅಗೆಯಲಾಗಿತ್ತು. ಆದರೆ ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಇಂದು ಇದೀಗ 2ನೇ ಮತ್ತು 3ನೇ ಸ್ಥಳವನ್ನು ಅಗೆಯಲಾಗಿದ್ದು ಆ ಸ್ಥಳದಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲೇ ಇರುವ ಕಾಡಿನ ಪ್ರವೇಶದ ಬಳಿ 2ನೇ ಸ್ಥಳ ಗುರುತಿಸಲಾಗಿತ್ತು. ಇಂದು ಕಾರ್ಮಿಕರು 6 ಅಡಿ ಆಳದವರೆಗೆ ಸಮಾಧಿ ಸ್ಥಳ ಅಗೆದಿದ್ದಾರೆ. ಆದರೆ ಯಾವುದೇ ಕಳೇಬರಹ ಪತ್ತೆಯಾಗಿಲ್ಲ. ಹೀಗಾಗಿ 2ನೇ ಸಮಾಧಿ ಸ್ಥಳದ ಉತ್ಖನನ ಕಾರ್ಯ ಅಂತ್ಯಗೊಳಿಸಲಾಗಿದೆ. ಬಳಿಕದ ಮೂರನೇ ಸ್ಥಳದಲ್ಲೂ ಉತ್ಖನನ ಕಾರ್ಯ ನಡೆದಿದ್ದು ಅಲ್ಲೂ ಯಾವುದೇ ಕಳೇಬರ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!