ಕ್ಷಮೆ ಕೇಳಿದರೂ ತಣ್ಣಗಾಗದ ಆಕ್ರೋಶ
ಪುತ್ತೂರು ಬ್ಲಾಕ್ ವಿರುದ್ದ ಹೈಕಮಾಂಡ್‌ಗೆ ದೂರು..?
ಪುತ್ತೂರು: ಪುತ್ತೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೋಮುವಾದಿ ಪುರೋಹಿತರೋರ್ವರಿಂದ ಪೂಜೆ ಮಾಡಿಸಿದ ವಿಚಾರ ಗೊಂದಲಕ್ಕೆ ಕಾರಣವಾಗಿ ಆ ಬಳಿಕದ ಬೆಳವಣಿಗೆಯಲ್ಲಿ ಪೂಜೆ ಮಾಡಿದ ಪುರೋಹಿತ ಕೋಮುವಾದಿಯಾಗಿದ್ದು ಅವರಿಂದ ಪೂಜೆ ಮಾಡಿಸಿದ್ದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಾರ್ಯಕರ್ತರ ಕ್ಷಮೆಯನ್ನು ಕೇಳಿದ್ದಾರೆ. ಆದರೆ ಕಾರ್ಯಕರ್ತರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವಿರುದ್ದ ಹ್ಯಕಮಾಂಡ್‌ಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಪೂಜೆ ಮಾಡಿದ ಪುರೋಹಿತ ಹೇಗೆ ಎಂಬುದು ಎಲ್ಲಾ ಕಾಂಗ್ರೆಸ್ಸಿಗರಿಗೂ ಗೊತ್ತಿದೆ, ಉಳಿದವರಿಗೂ ಗೊತ್ತಿದೆ. ಇದೇ ವ್ಯಕ್ತಿಯ ವಿರುದ್ದ ಕಾಂಗ್ರೆಸ್ ಕಚೇರಿಯಲ್ಲೇ ಸುದ್ದಿಗೋಷ್ಟಿ ನಡೆಸಲಾಗಿತ್ತು.
ಇಷ್ಟೆಲ್ಲಾ ವಿಚಾರ ಗೊತ್ತಿದ್ದ ಬಳಿಕವೂ ಉದ್ದೇಶಪೂರ್ವಕವಾಗಿಯೇ ಅವರನ್ನೇ ಕರೆಸಲಾಗಿದೆ ಎಂಬ ಆರೋಪ ಕಾರ್ಯಕರ್ತರಿಂದ ಕೇಳಿ ಬಂದಿತ್ತು. ಪುತ್ತೂರಿನಲ್ಲೇ ನೂರಾರು ಪುರೋಹಿತರಿರುವಾಗ ಅವರನ್ನೇ ಯಾಕೆ ಕರೆಯಬೇಕಿತ್ತು ಎಂಬ ಅನುಮಾನ ಕಾರ್ಯಕರ್ತರಲ್ಲಿದೆ.
ಜಾತ್ಯಾತೀತ ತತ್ವದಡಿ ಬಲವಾದ ನಂಬಿಕೆ ಮತ್ತು ಅದೇ ನಂಬಿಕೆಯಲ್ಲಿ ದೇಶವನ್ನು ಕಟ್ಟಿದ ಕಾಂಗ್ರೆಸ್‌ನ ಈ ಸಿದ್ದಾಂತಕ್ಕೆ ವಿರುದ್ದವಾಗಿ ಕೆಲವು ನಾಯಕರೆನಿಸಿಕೊಂಡವರು ನಡೆದುಕೊಂಡಿದ್ದಾರೆ ಎಂದು ಆರೋಪಿಸುವ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿ ಎಂ ಸಿದ್ದರಾಮಯ್ಯ ಅವರಲ್ಲಿ ವಿಷಯವನ್ನು ಪ್ರಸ್ತಾಪಿಸಿ ದೂರು ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.