ಅಂತಾರಾಷ್ಟ್ರೀಯ

ದುಬೈಯಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ

ದುಬೈಯಲ್ಲಿ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಯುಎಇಯ ದುಬೈನಲ್ಲಿರುವ ಅಲ್ಮಖ್ತೂಮ್ ಇಂಟರ್ನ್ಯಾಷನಲ್ ಏರ್ಪೋರ್ಟ್ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣವಾಗಿ ನಿರ್ಮಾಣವಾಗಲಿದೆ.

ದುಬೈನ ಈ 2ನೇ ಏರ್ಪೋರ್ಟ್ ನಲ್ಲಿ ಹೊಸ ಟರ್ಮಿನಲ್ ತಯಾರಾಗುತ್ತಿದೆ. ಈ ಟರ್ಮಿನಲ್ ಅಂದಾಜು 35 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸಿದ್ದಗೊಳ್ಳಲಿದೆ. ಹಾಗೂ ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗಿದೆ. ಈ ಟರ್ಮಿನಲ್ ನಲ್ಲಿ 400 ಗೇಟ್, 5 ರನ್ ವೇ ಇರಲಿವೆ.

ದುಬೈನ ದಕ್ಷಿಣ ಭಾಗದಲ್ಲಿರುವ ಮರುಭೂಮಿಯಲ್ಲಿ ಮುಂದಿನ 10 ವರ್ಷದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ವಿಶ್ವದ ಅತ್ಯಂತ ಬಿಡುವಿಲ್ಲದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ತನ್ನ ಇಡೀ ಕಾರ್ಯಾಚರಣೆಗಳನ್ನು ಈ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!