ಕೆ.ಸಿ.ಎಫ್ ಒಮಾನ್ ರಾಷ್ಟೀಯ ಸಮಿತಿಯಿಂದ ಬೃಹತ್ ಮಿಲಾದ್ ಸಮಾವೇಶದ ಸ್ವಾಗತ ಸಮಿತಿ ರಚನೆ
ಮಸ್ಕತ್: ಕೆ.ಸಿ.ಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್(ಸ.ಅ) ರವರ ಜನ್ಮದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್ 19ರಂದು ಗೊಲ್ಡನ್ ತುಲಿಪ್ ರುವಿ ಸಭಾಂಗಣದಲ್ಲಿ ನಡೆಯಲಿರುವ “ಪ್ರವಾದಿ ಕಾಲಾತೀತ ಮಾರ್ಗದರ್ಶಿ” ಎಂಬ ಶೀರ್ಷಿಕೆಯ ಬೃಹತ್ ಮಿಲಾದ್ ಸಮಾವೇಶದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಇತ್ತೀಚೆಗೆ ಸೀಬ್ ಮದರಸ ಸಭಾಂಗಣದಲ್ಲಿ ನಡೆದ ಸ್ವಾಗತ ಸಮಿತಿ ರಚನಾ ಸಭೆಯು ಕೆ.ಸಿ.ಎಫ್ ಒಮಾನ್ ಅಧ್ಯಕ್ಷ ಹಂಝ ಹಾಜಿ ಕನ್ನಂಗಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಗೆ ಕೆ.ಸಿ.ಎಫ್ ಒಮಾನ್ ಶಿಕ್ಷಣ ವಿಭಾಗದ ಅಧ್ಯಕ್ಷ ಉಬೈದುಲ್ಲಾ ಸಖಾಫಿ ಮಿತ್ತೂರು ದುಆದೊಂದಿಗೆ ಚಾಲನೆ ನೀಡಿದರು. ಬಳಿಕ, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಇಹ್ಸಾನ್ ವಿಭಾಗದ ಚೆಯರ್ಮನ್ ಅಯ್ಯೂಬ್ ಕೋಡಿ ಸಭೆಯನ್ನು ಉದ್ಘಾಟಿಸಿದರು.
ಈ ಬೃಹತ್ ಸಮಾವೇಶದ ಸ್ವಾಗತ ಸಮಿತಿಗೆ ಕೆಳಕಂಡವರನ್ನು ನೇಮಕ ಮಾಡಲಾಯಿತು:
• ಚೆಯರ್ಮನ್: ಆಬಿದ್ ಪಾಶ ಬಾಳೆಹೊನ್ನೂರ್ (ಒವೈಸ್ ಇಂಟರ್ನ್ಯಾಶನಲ್)
ವರ್ಕಿಂಗ್ ಚೇರ್ಮನ್: ಅಯ್ಯೂಬ್ ಕೋಡಿ
• ಜನರಲ್ ಕನ್ವೀನರ್: ಸಯ್ಯದ್ ಆಬಿದ್ ತಂಙಲ್ ಎಮ್ಮೆಮಾಡು
• ಫಿನಾನ್ಸಿಯಲ್ ಕಂಟ್ರೋಲರ್: ಹಸೀಫ್ ಇಕ್ಬಾಲ್ ಕಂದಾವರ
• ಸಹ ಕನ್ವೀನರ್‌ಗಳು: ಹನೀಫ್ ಮನ್ನಾಪು, ಲತೀಫ್ ಮಂಜೇಶ್ವರ
• ಫೈನಾನ್ಸಿಯಲ್ ಕನ್ವೀನರ್‌ಗಳು: ಉಮರ್ ಸಖಾಫಿ ಎಡಪ್ಪಾಲ, ಆರಿಫ್ ಕೋಡಿ ಮತ್ತು 101 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ಪಾಲೆತಡ್ಕ, ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಇಬ್ರಾಹಿಂ ಹಾಜಿ ಅತ್ರಾಡಿ, ರಾಷ್ಟ್ರೀಯ ಸಮಿತಿ ನಾಯಕರಾದ ಸ್ವಾದಿಕ್ ಹಾಜಿ ಸುಳ್ಯ, ಝುಬೈರ್ ಸಅದಿ, ಹಾರಿಸ್ ಕೊಳಕೇರಿ, ಆದಂ ಮದನಿ, ಹುಸೈನ್ ತೀರ್ಥಹಳ್ಳಿ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
ಸ್ವಾಗತ ಸಮಿತಿ ಕನ್ವೀನರ್ ಲತೀಫ್ ಮಂಜೇಶ್ವರ ಸ್ವಾಗತಿಸಿ ವಂದಿಸಿದರು.