ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್ : ಹುಡುಗ ಯಾರು?
ಬೆಂಗಳೂರು: ಖ್ಯಾತ ನಿರೂಪಕಿ ಅನುಶ್ರೀ ವಿವಾಹದ ಕುರಿತಂತೆ ಹಬ್ಬಿದ್ದ ಎಲ್ಲ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದಿದ್ದು ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿರಿ ಸಲಿದ್ದಾರೆ. ಅನುಶ್ರೀ ಅವರ ವಿವಾಹದ ವಿಚಾರ ಇದೀಗ ನಿಜವಾಗುತ್ತಿದ್ದು, ಆಗಸ್ಟ್ ತಿಂಗಳಲ್ಲಿ ಅವರ ವಿವಾಹ ನಡೆಯಲಿದೆ ಎಂದು ತಿಳಿದು ಬಂದಿದೆ.

ಆ್ಯಂಕರ್ ಅನುಶ್ರೀ ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ವಿವಾಹವಾಗುತ್ತಿದ್ದಾರೆ ಎನ್ನಲಾಗಿದೆ. ರೋಷನ್ ಮೂಲತ ಕೊಡಗಿನವರಾಗಿದ್ದು, ಐಟಿ ವೃತ್ತಿಪರರು ಎಂದು ತಿಳಿದುಬಂದಿದೆ. ಈಗಾಗಲೇ ಎರಡೂ ಕುಟುಂಬಗಳು ಮದುವೆಗೆ ಸಕಲ ಸಿದ್ಧತೆಗಳನ್ನು ಮಾಡುತ್ತಿವೆ ಎನ್ನಲಾಗುತ್ತಿದೆ.
ಇದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಕುಟುಂಬದವರು ನೋಡಿರುವ ಹುಡುಗನನ್ನು ಅನುಶ್ರೀ ವರಿಸುತ್ತಿದ್ದಾರೆ ಎನ್ನಲಾಗಿದೆ.
ಅನುಶ್ರೀ ಮತ್ತು ರೋಷನ್ ಮದುವೆ ಮುಂಬರುವ ಆಗಸ್ಟ್ ತಿಂಗಳಲ್ಲಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆಗಸ್ಟ್ 28ರಂದು ಬೆಂಗಳೂರಿನಲ್ಲಿಯೇ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.