ಆರೋಗ್ಯರಾಷ್ಟ್ರೀಯ

ಕೆಮ್ಮು, ಶೀತ ಸಿರಪ್‌ಗಳ ಸೇವನೆಯಿಂದ 60ಕ್ಕೂ ಹೆಚ್ಚು ಮಕ್ಕಳು ಸಾವು: ಗಾಂಬಿಯಾದಲ್ಲಿ ಸಿರಪ್ ಹಿಂಪಡೆಯುವ ಅಭಿಯಾನ

ಪಶ್ಚಿಮ ಆಫ್ರಿಕಾದ ಗಾಂಬಿಯಾದಲ್ಲಿ ಕೆಮ್ಮು ಮತ್ತು ಶೀತ ಸಿರಪ್‌ಗಳ ಸೇವನೆಯಿಂದಾಗಿ ಮೂತ್ರಪಿಂಡ ಸಮಸ್ಯೆಯಿಂದ 60ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದು, ಈ ಸಿರಪ್‌ಗಳನ್ನು ಹಿಂಪಡೆಯಲು ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಈ ಸಂಬಂಧ ಮನೆ ಮನೆಗೆ ತೆರಳಿ, ಕೆಮ್ಮಿನ ಸಿರಪ್‌ನ ಸೀಸೆಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ, ಆರೋಗ್ಯ ಸಚಿವಾಲಯವು ಅಲ್ಲಿನ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ನೂರಾರು ಯುವಕರ ತಂಡಗಳನ್ನು ರಚಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!