ಕಡಬ ಪಟ್ಟಣ ಪಂಚಾಯತ್ ನ 13 ವಾರ್ಡುಗಳಿಗೆ ಕೊನೆಗೂ ಚುನಾವಣೆ ಘೋಷಣೆ
ಕಡಬ ಪಟ್ಟಣ ಪಂಚಾಯತ್ ನ 13 ವಾರ್ಡುಗಳಿಗೆ ಕೊನೆಗೂ ಚುನಾವಣೆ ನಿಗದಿಯಾಗಿದೆ. ಕಳೆದ ಐದು ವರ್ಷಗಳಿಂದ ಚುನಾವಣೆ ನಡೆಯದೇ ಇದ್ದ ಕಡಬ ಪಟ್ಟಣ ಪಂಚಾಯತಿ ಚುನಾವಣೆ ಆಗಸ್ಟ್ 17ರಂದು ನಡೆಯಲಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.

ಜುಲೈ 29ರ ಜಿಲ್ಲಾಧಿಕಾರಿಯವರು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು ನಾಮಪತ್ರಗಳನ್ನು ಸಲ್ಲಿಸಲು ಆಗಸ್ಟ್ 5 ಕೊನೆಯ ದಿನವಾಗಿರುತ್ತದೆ. ಆಗಸ್ಟ್ 6 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಆಗಸ್ಟ್ 8ರಂದು ನಾಮಪತ್ರ ಹಿಂತೆಗೆಯುವ ಕಡೆ ದಿನವಾಗಿರುತ್ತದೆ. ಆಗಸ್ಟ್ 17ರಂದು ಬೆಳಿಗ್ಗೆ 7ರಿಂದ ಸಂಜೆ 5:00 ವರೆಗೆ ಮತದಾನ ನಡೆಯಲಿದ್ದು ಆಗಸ್ಟ್ 20ರಂದು ಮತ ಎಣಿಕೆ ನಡೆಯಲಿದೆ