ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ವೀಡಿಯೋ ಪ್ರಸಾರ: ಯುವಕನ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಸಾಮಾಜಿಕ ಜಾಲತಾಣವಾದ ಇನ್ಸ್ಟ್ರಾಗ್ರಾಮ್ ನಲ್ಲಿ ಸಮುದಾಯಗಳ ನಡುವೆ ಕೋಮುದ್ವೇಷ ಉಂಟಾಗಿ, ಕಾನೂನು ಸುವ್ಯವಸ್ಥೆ ಗೆ ದಕ್ಕೆಯಾಗುವಂತಹ ಪ್ರಚೋದನಾತ್ಮಕ ವೀಡಿಯೋವನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ನಿವಾಸಿ ಧನುಷ್ ಎಂಬಾತನ ವಿರುದ್ಧ ದಿನಾಂಕ:04-05-2025 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 30/2025 ಕಲಂ: 196(1)(A), 353(1)(C) BNS-2023 ರಂತೆ ಪ್ರಕರಣ ದಾಖಲಾಗಿದೆ.