ಬೆಳ್ತಂಗಡಿ: 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬೆಳ್ತಂಗಡಿ ಪೊಲೀಸ್ ಠಾಣಾ (ಅ.ಕ್ರ 68/1989 ಕಲಂ, 341,323,326 ಜೊತೆಗೆ 34 ಐಪಿಸಿ. CC No. 1720/1990 CR NO. Lpc 04/1992) ಪ್ರಕರಣದಲ್ಲಿ ಸುಮಾರು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರವೀಂದ್ರ ಚಾರ್ಮಾಡಿ ಎಂಬಾತನನ್ನು ಪೊಲೀಸರು ಕಾರ್ಕಳ ತಾಲೂಕು ನಲ್ಲೂರು ಎಂಬಲ್ಲಿಂದ ಬಂಧಿಸಿ ಜ.6ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿದೆ.


