ಕರಾವಳಿ

ಪುತ್ತೂರು: ಪ್ರತಿಭಟನೆಯಲ್ಲಿ ಶಾಸಕ ಅಶೋಕ್ ರೈಯವರನ್ನು ನಿಂದಿಸಿದ ವಿಚಾರ- ಶಾಸಕರಿಂದ ಪ್ರತಿಕ್ರಿಯೆ

ಪುತ್ತೂರು: ಜು.7ರಂದು ಪುತ್ತೂರು ದರ್ಬೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಅಶೋಕ್ ರೈಯವರನ್ನು ನಿಂದಿಸಿ ಭಾಷಣ ಮಾಡಿದ ವಿಚಾರದ ಬಗ್ಗೆ ಶಾಸಕರು ಪ್ರತಿಕ್ರಿಯೆ ನೀಡಿದ್ದು ಒಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸಂಸ್ಕೃತಿಯಲ್ಲ, ಯಾವನೋ ಒಬ್ಬ ಎಲ್ಲಿಂದಲೋ ಬಂದು ಮಾತನಾಡಿದ್ದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ಏಕವಚನದಲ್ಲಿ ಮಾತನಾಡಿ ಯಾರೂ ದೊಡ್ಡ ವ್ಯಕ್ತಿ ಆಗುವುದಿಲ್ಲ, ಅವರು ಸ್ವಲ್ಪ ಹೊತ್ತು ಪುತ್ತೂರಲ್ಲಿ ಇರಬೇಕಿತ್ತು, ಬುದ್ದಿ ಕಲಿಸುವ ಕೆಲಸ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.


ನಾವು ಯಾರಿಗೂ ವಿರೋಧ ಇಲ್ಲ, ಯಾರು ಅನವಶ್ಯಕವಾಗಿ ಇಂತಹ ವಿಚಾರ ಸೃಷ್ಟಿ ಮಾಡ್ತಾರೆ ಅವರನ್ನು ಎದುರಿಸಲು ನಮಗೆ ಗೊತ್ತಿದೆ ಎಂದರು. ಪ್ರತಿಭಟನೆ ನಡೆಸಿದವರಲ್ಲಿ ಪುತ್ತೂರಿನವರು ಕೇವಲ ಎರಡು ಮಂದಿ ಮಾತ್ರ ಇದ್ದು ಉಳಿದವರು ಸುಳ್ಯದಿಂದ ಎಲ್ಲ ಬಂದು ಒಟ್ಟು ಮೂವತ್ತು ಜನ ಇದ್ದರು. ಅದಕ್ಕೆ ಪುತ್ತೂರಿನ ಯುವಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕರು ಹೇಳಿದರು.

Leave a Reply

Your email address will not be published. Required fields are marked *

error: Content is protected !!