SMA ಉಜಿರೆ ರೀಜನಲ್ ವತಿಯಿಂದ ಪ್ರತಿಭಾ ಪುರಸ್ಕಾರ
ಬೆಳ್ತಂಗಡಿ: ಎಸ್.ಎಂ.ಎ ಉಜಿರೆ ರೀಜನಲ್ ವತಿಯಿಂದ ಪ್ರತಿಭಾ ಪುರಸ್ಕಾರ ಉಜಿರೆ ಟೌನ್ ಮದ್ರಸ ಹಾಲ್ ನಲ್ಲಿ ನಡೆಯಿತು.

ಉಜಿರೆ ರೀಜನಲ್ ವ್ಯಾಪ್ತಿಯ ಮೊಹಲ್ಲಾ ಗಳಿಂದ ಆಯ್ದು ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹಾಗೂ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಕಲಿಸಿದ ಮುಅಲ್ಲಿಮರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೀಜನಲ್ ಅಧ್ಯಕ್ಷರಾದ ಅಬೂಬಕ್ಕರ್ ಸಮಡೈನ್ ವಹಿಸಿದ್ದರು.
ರೀಜನಲ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ ಹನೀಫಿ ನಚ್ಚಬೆಟ್ಟು ಸ್ವಾಗತಿಸಿದರು, SJM ಉಜಿರೆ ರೇಂಜ್ ಅಧ್ಯಕ್ಷರಾದ ರಫೀಕ್ ಮದನಿ ಹಳೆಪೇಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರೀಜನಲ್ ಕೋಶಾಧಿಕಾರಿ ಹೈದರ್ ಮದನಿ SMA ರಾಜ್ಯ ನಾಯಕರಾದ ಸ್ವಾದಿಖ್ ಮಾಸ್ಟರ್, ಇಬ್ರಾಹಿಂ ಸಖಾಫಿ ಕಬಕ, ಝೋನಲ್ ಪ್ರಧಾನ ಕಾರ್ಯದರ್ಶಿ ಹಮೀದ್ ಸಅದಿ ಕೋಶಾಧಿಕಾರಿ ಅಬ್ದುಲ್ಲಾ ಮಲೆಬೆಟ್ಟು SJM ಉಜಿರೆ ರೇಂಜ್ ಪ್ರಧಾನ ಕಾರ್ಯದರ್ಶಿ ಹಾಫಿಝ್ ಅಬ್ದುಲ್ ಬಾಸಿತ್ ಹಿಮಮಿ ಸಖಾಫಿ ನಾವೂರು ಕೋಶಾಧಿಕಾರಿ ಫಾರೂಖ್ ಸಅದಿ ಪದ್ಮುಂಜ ಹಾಗೂ ಇತರ ರೀಜನಲ್ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.