ಭರತ್ ಕುಮ್ಡೇಲ್ ಮನೆಯಲ್ಲಿ ಪೊಲೀಸರಿಂದ ಶೋಧ
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಭರತ್ ಕುಮ್ಡೇಲ್ ಎಂಬಾತನ ಮನೆಯನ್ನು ಪೊಲೀಸರು ಶೋಧ ನಡೆಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಗೆ ಸಂಬಂಧಿಸಿ ಪ್ರಕರಣದ ತನಿಖಾ ತಂಡವು ಜೂ.4ರಂದು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಬಂಟ್ವಾಳ ಪುದು ಗ್ರಾಮದ ನಿವಾಸಿ ಭರತ್ ಕುಮ್ಡೇಲ್ ಮನೆಯನ್ನು ಶೋಧ ನಡೆಸಿದ್ದಾರೆ.