ಫೆ.28: ನೇರಳಕಟ್ಟೆಯಲ್ಲಿ ‘ಭಾರತ್ ಸೇವಾ ಕೇಂದ್ರ’ ಶುಭಾರಂಭ
ಪುತ್ತೂರು: ಮಾಣಿ ಸಮೀಪದ ನೇರಳಕಟ್ಟೆ ಗಣೇಶ್‌ನಗರದಲ್ಲಿ ವಾಯುಮಾಲಿನ್ಯ ತಪಾಸಣಾ ಕೇಂದ್ರ, ವೆಹಿಕಲ್ ಇನ್ಸೂರೆನ್ಸ್ ಹಾಗೂ ಡಿಜಿಟಲ್ ಸೇವೆಯನ್ನೊಳಗೊಂಡ ‘ಭಾರತ್ ಸೇವಾ ಕೇಂದ್ರ’ ತನ್ಹಾ ಎಂಟರ್ ಪ್ರೈಸಸ್ ಫೆ.28ರಂದು ಶುಭಾರಂಭಗೊಳ್ಳಲಿದೆ.

ಬ್ಯಾಂಕ್ ಆಫ್ ಬರೋಡ ಪುತ್ತೂರು ಇದರ ಚೀಫ್ ಮೆನೇಜರ್ ಸಾದಿಕ್ ಎಸ್ ಎಂ ಸಂಸ್ಥೆಯನ್ನು ಉದ್ಘಾಟಿಸಲಿದ್ದು ಸಯ್ಯದ್ ಹಂಝ ತಂಗಳ್ ಪಾಟ್ರಕೋಡಿ, ಉದ್ಯಮಿ ಹರೀಶ್ ಎಂ ಶೆಟ್ಟಿ ಬೆಂಗಳೂರು,
ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಸ್ಥೆಯಲ್ಲಿ ಪಾನ್‌ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ರೇಶನ್ ಕಾರ್ಡ್, ಇಪಿಎಫ್ ಸೇವೆಗಳು, ಹಿರಿಯ ನಾಗರಿಕರಿಗೆ ಗುರುತಿನ ಚೀಟಿ, ಜಾತಿ ಆದಾಯ ಮತ್ತು ವಾಸ್ತವ್ಯ, ಪ್ರಮಾಣ ಪತ್ರ, ಆದಾಯ ತೆರಿಗೆ ರಿಟರ್ನಿಂಗ್, ಜಿಎಸ್‌ಟಿ ರಿಜಿಸ್ಟ್ರೇಶನ್, ಪಿಂಚಣಿದಾರರ ಜೀವನ್ ಪ್ರಮಾಣ ಪತ್ರ, ಆರ್.ಟಿ.ಸಿ, ವಾಹನಗಳ ಇನ್ಸೂರೆನ್ಸ್, ವಿದ್ಯಾರ್ಥಿ ವೇತನ, ರಾಷ್ಟ್ರೀಯ ಪಿಂಚಣಿ ಯೋಜನೆ, ಡ್ರೈವಿಂಗ್ ಲೈಸೆನ್ಸ್, ಕಾರ್ಮಿಕ ಕಾರ್ಡ್, ವೋಟರ್ ಐಡಿ, ಇ-ಶ್ರಮ್, 9/11, ವಿವಾಹ ನೋಂದಣಿ, ವೃದ್ದಾಪ್ಯ ವೇತನ ಹಾಗು ಸಂಧ್ಯಾ ಸುರಕ್ಷಾ ಪಿಂಚಣಿ ಸೇವೆಗಳು ಲಭ್ಯವಿರದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.