ತೊಂಡೆ ಕಾಯಿ ಬಳ್ಳಿಯನ್ನು ಹುಣ್ಣಿಮೆಯಂದೇ ಯಾಕೆ ನೆಡಬೇಕು ಗೊತ್ತಾ?
ತೊಂಡೆ ಕಾಯಿ ನೆಡುವಾಗ ಇರಲಿ ಎಚ್ಚರ…!!!
ಪೃಕೃತಿ ಎಂಬುದು ವಿಚಿತ್ರ. ಪೃಕೃತ್ತಿ ವಿರುದ್ದವಾಗಿ ನಾವು ನಡೆದುಕೊಂಡರೇ ಪೃಕೃತಿಯೇ ನಮಗೆ ಪಾಠ ಕಲಿಸಿದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ನಮ್ಮ ಪೂರ್ವಜನರು ಯಾವುದೇ ಕೃಷಿ ಮಾಡುವುದಾದರೂ ಅದನ್ನು ಸಂಪ್ರದಾಯ ಬದ್ದವಾಗಿಯೇ ಮಾಡುತ್ತಿದ್ದರು. ಪೃಕೃತ್ತಿಗೆ ವಿರುದ್ದವಾಗಿ ಯಾವುದನ್ನೂ ಮಾಡುತ್ತಿರಲಿಲ್ಲ ಯಾಕೆಂದರೆ ಅವರು ಪೃಕೃತ್ತಿಯನ್ನೇ ಪೂರ್ಣವಾಗಿ ನಂಬಿದ್ದರು. ಅದರಲ್ಲೂ ತರಕಾರಿ ಕೃಷಿ ಮಾಡುವಾಗ ಇಂತದ್ದೇ ದಿನದಂದು ಅದನ್ನು ನೆಡಬೇಕು, ಇಂತಹ ದಿವಸವೇ ಬೀಜ ಬಿತ್ತಬೇಕು ಎಂಬ ನಿಯಮವನ್ನು ರೂಢಿಸಿಕೊಂಡಿದ್ದರು. ಅದೇ ರೂಡಿಯನ್ನು ಇಂದಿಗೂ ಫಾಲೋ ಮಾಡಿಕೊಂಡು ಬಂಧವರೂ ಇದ್ದಾರೆ.
ಈ ನಿಯಮದ ಬಗ್ಗೆ ವೈಜ್ಞಾನಿಕ ಕುರುಹು ಕೇಳಿದರೆ ಅದಕ್ಕೆ ಉತ್ತರ ಸಿಗದು ಯಾಕೆಂದರೆ ಅದೊಂದು ನಂಬಿಕೆ ಅಷ್ಟೆ…
ತೊಂಡೆ ಕಾಯಿ ಬಳ್ಳಿ ಸಾಧಾರಣ ಎಲ್ಲರ ಮನೆಯಂಗಳದಲ್ಲಿ ಇರುತ್ತದೆ. ಬಳ್ಳಿ ನೆಟ್ಟು ಬಿಟ್ಟರೆ ಅದಕ್ಕೊಂದು ಚಪ್ಪರ ಹಾಕಿದರೆ ಸಾಕು ಸಾಕಷ್ಟು ಪ್ರಮಾಣದಲ್ಲಿ ತೊಂಡೆ ಕಾಯಿಯನ್ನು ಪಡೆಯಬಹುದಾಗಿದೆ. ವರ್ಷದ ಆರು ತಿಂಗಳು ಇದು ಬೆಳೆ ಕೊಡುತ್ತದೆ. ಮಳೆಗಾಲದಲ್ಲಿ ಇದು ಸತ್ತು ಹೋಗುತ್ತದೆ ಕಾಯಿ ಬಿಡುವುದಿಲ್ಲ.
ಯಾವಾಗ ನೆಡಬೇಕು?
ತೊಂಡೆ ಕಾಯಿ ಬಳ್ಳಿಯನ್ನು ಕತ್ತರಿಸುವಾಗ ಅದರ ಗಂಟುಗಳ ಸಿಪ್ಪೆ ಹೋಗದಂತೆ ಎಚ್ಚರವಹಿಸಬೇಕು. ಗಂಟಿನಲ್ಲೇ ಮೊಳೆ ಚಿಗುರೊಡೆಯುವ ಕಾರಣ ಅದಕ್ಕೆ ಏಟಾಗದಂತೆ ನೋಡಿಕೊಳ್ಳಬೇಕು. ಒಂದು ಗಂಟು ಮಣ್ಣಿನ ಅಡಿಗೆ ಭಾಗದಲ್ಲಿ ಇನ್ನೊಂದು ಗಂಟೆ ಮಣ್ಣಿಗೆ ತಾಗಿಕೊಂಡು, ಇನ್ನೆಡರು ಗಂಟು ಮೇಲ್ಭಾಗದಲ್ಲಿ ಇದ್ದರೆ ಚೆನ್ನ. ತೊಂಡೆ ಕಾಯಿ ಬಳ್ಳಿಯನ್ನು ಹುಣ್ಣಿಮೆಯಂದೇ ನೆಟ್ಟರೆ ಒಳ್ಳೆಯದು. ಹುಣ್ಣಿಮೆಯ ಬಳಿಕ ನೆಡುವುದು ಸೂಕ್ತವಾದ ಸಮಯವಲ್ಲ. ಹುಣ್ಣಿಮೆ ಸಮಯದಲ್ಲಿ ನೆಟ್ಟ ಗಿಡಗಳು ಹೆಚ್ಚು ಹೂ ಬಿಡುತ್ತದೆ ಎಂಬುದು ಹಿರಿಯರ ನಂಬಿಕೆ. ಅದೇ ರೀತಿ ತೊಂಡೆ ಕಾಯಿ ಬಳ್ಳಿಯಲ್ಲಿ ಬಿಟ್ಟ ಹೂವುಗಳಲ್ಲಿ ಕಾಯಿ ಆಗುವುದು ನಿಶ್ಚಿತ ಮತ್ತು ಇದರ ಹೂ ಉದುರುವುದಿಲ್ಲವಾದ್ದರಿಂದ ಹುಣ್ಣಿಮೆಯೇ ಸೂಕ್ತ ಸಮಯ ಎಂಬ ಬಲವಾದ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ.
ನಂಬಿಕೆ ಇದೆ:
ಹುಣ್ಣಿಮೆಯ ದಿನ ತೊಂಡೆ ಕಾಯಿ ಬಳ್ಳಿ ನೆಡಬೇಕು ಎಂಬ ರೂಡಿ ಹಳೆಯ ಕಾಲದಿಂದಲೇ ಚಾಲ್ತಿಯಲ್ಲಿದೆ. ಇದಕ್ಕೆ ವೈಜ್ಞಾನಿಕ ಹಿನ್ನೆಲೆ ಏನೆಂದು ಕೇಳಿದರೆ ಅದಕ್ಕೆ ಉತ್ತರ ಕೊಡುವುದು ಕಷ್ಟ ಸಾಧ್ಯವಾಗುತ್ತದೆ. ನೆಡುವವರು ಹುಣ್ಣಿಮೆಯಂದೇ ನೆಟ್ಟು ನೋಡಿ ಹೆಚ್ಚು ಫಲ ಕೊಡುತ್ತದೆ ಎನ್ನುತ್ತಾರೆ ಪ್ರಗತಿ ಪರ ಕೃಷಿಕರಾದ ನಾರಾಯಣ ಪ್ರಕಾಶ್.