ಕರಾವಳಿ

ಮಂಗಳೂರು: ರಾಜಕಾಲುವೆಗೆ ಕಾರು ಬಿದ್ದು ಫೊಟೋಗ್ರಾಫರ್‌ ಸಾವು

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ರಾಜಕಾಲುವೆಗೆ ಬಿದ್ದ ಪರಿಣಾಮ ಫೊಟೋಗ್ರಾಫರ್‌ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ಬುಧವಾರ ನಡೆದಿದೆ.


ಕಾಸರಗೋಡಿನ ಬಂದ್ಯೋಡು ಬಜೆ ನಿವಾಸಿ
ಸೂರ್ಯನಾರಾಯಣ (51ವ) ಮೃತಪಟ್ಟ ವ್ಯಕ್ತಿ ಎಂದು ವರದಿಯಾಗಿದೆ.


ಪಣಂಬೂರಿನಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆಂದು ಬಂದ್ಯೋಡಿನಿಂದ ಬುಧವಾರ ಬೆಳಗ್ಗೆ ಕಾರಿನಲ್ಲಿ ಬಂದಿದ್ದ ಸೂರ್ಯನಾರಾಯಣ ಅವರು  ಕೋಡಿಕಲ್‌ ಕ್ರಾಸ್‌ ಬಳಿ ಕಾರು ನಿಯಂತ್ರಣ ಕಳೆದುಕೊಂಡು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ತಡೆ ಇಲ್ಲದ ನೀರು ತುಂಬಿದ ರಾಜಕಾಲುವೆಗೆ ಬಿದ್ದಿತು. ಕಾರನ್ನು ಚಲಾಯಿಸುತ್ತಿದ್ದ ಸೂರ್ಯನಾರಾಯಣ ಅವರು ಮೃತಪಟ್ಟಿರುವುದಗೂ ತಿಳಿದು ಬಂದಿದೆ

Leave a Reply

Your email address will not be published. Required fields are marked *

error: Content is protected !!