ನನ್ನ ಮಗುವಿನ ಮುಖ ನೋಡಿದರೆ ಯಾರೂ ಕೊಲ್ಲಲು ಸಾಧ್ಯವಿಲ್ಲ: ಮೃತ ಅಬ್ದುಲ್ ರಹಿಮಾನ್ ತಂದೆ ಕಣ್ಣೀರು
ಮಂಗಳೂರು: ನನ್ನ ಬಂಗಾರದಂತಹ ಮಗುವನ್ನು ಕೊಂದಿದ್ದಾರೆ, ನನ್ನ ಮಗುವಿನ ಮುಖ ನೋಡಿದರೆ ಯಾರೂ ಅವನನ್ನು ಕೊಲ್ಲಲು ಸಾಧ್ಯವಿಲ್ಲ, ನನ್ನ ಮಗುವಿನ ಜೊತೆ ನಾನೂ ಹೋಗುತ್ತೇನೆ ಎಂದು ಕೊಲೆಯಾದ ಅಬ್ದುಲ್ ರಹಿಮಾನ್ ತಂದೆ ಅಬ್ದುಲ್ ಖಾದರ್ ಕಣ್ಣೀರು ಹಾಕುತ್ತಾ ನೋವು ತೋಡಿಕೊಂಡಿದ್ದಾರೆ.

ನಮಗೆ ಆಧಾರವಾಗಿದ್ದ ಮಗನ ಕೊಲೆಯಾಗಿದೆ, ಇದಕ್ಕೆ ನ್ಯಾಯ ಸಿಗಬೇಕು, ಯಾರಿಗೂ ನೋವು ಮಾಡದ, ತಪ್ಪು ಮಾಡದ ನನ್ನ ಮಗನನ್ನು ಯಾಕಾದರೂ ಕೊಲೆ ಮಾಡಿದ್ದಾರೆ, ನಮಗೆ ನ್ಯಾಯ ಬೇಕು ಎಂದು ಅವರು ಮನವಿ ಮಾಡಿದ್ದಾರೆ.