ಮಂಜ ಮಖಾಂ ಉರೂಸ್: ದಿನಾಂಕ ಪ್ರಕಟ
ಪುತ್ತೂರು: ಬೆಳಿಯೂರುಕಟ್ಟೆ ಮಂಜ ಮಖಾಂ ಉರೂಸ್ ದಿನಾಂಕ ಪ್ರಕಟಗೊಂಡಿದೆ.

ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉರೂಸ್ ಸಮಾರಂಭ ನಡೆಯಲಿದ್ದು ಈ ಬಾರಿಯ ಉರೂಸ್ ಕಾರ್ಯಕ್ರಮ ಮೇ. 23 ಮತ್ತು 24ರಂದು ನಡೆಯಲಿದೆ. ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಙಳ್, ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ, ಶೈಖುನಾ ಮಾಣಿ ಉಸ್ತಾದ್, ಶೈಖುನಾ ಓಲೆಮುಂಡೋವು ಉಸ್ತಾದ್, ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್, ನೌಫಲ್ ಸಖಾಫಿ ಕಳಸ, ಬದ್ರುದ್ದೀನ್ ಅಝ್‌ಹರಿ ಕೈಕಂಬ, ಬಿ.ಎಂ ಮುಹಮ್ಮದ್ ದಾರಿಮಿ ಪುಣಚ, ಹಸೈನಾರ್ ಫೈಝಿ ಪರಿಯಲ್ತಡ್ಕ, ಹಾಫಿಝ್ ಅಹ್ಮದ್ ಶರೀಫ್ ಸಖಾಫಿ ಉಕ್ಕುಡ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.