ಕರಾವಳಿಕ್ರೈಂ

ನೆಲ್ಯಾಡಿ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಪುತ್ತೂರು: ಚಾಕುವಿನಿಂದ ಇರಿದು ಯುವಕನೋರ್ವನನ್ನು ಬರ್ಬರ ರೀತಿಯಲ್ಲಿ ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ.

ಮನೆಯ ಅಂಗಳದಲ್ಲೇ ಚಾಕುವಿನಿಂದ ಇರಿದು ಕೊಲೆಗೈಯಲಾಗಿದ್ದು ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್‌ ಎಂದು ಗುರುತಿಸಲಾಗಿದೆ.



ಕೌಟುಂಬಿಕ ಕಲಹ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!