ತನ್ನ ಪುತ್ರನ ಹುಟ್ಟು ಹಬ್ಬವನ್ನು ಅಂಗನವಾಡಿಯಲ್ಲಿ ಆಚರಿಸಿದ ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ
ಪುತ್ತೂರು: ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸಾ ಪೆರುವಾಯಿ ಅವರ ಪುತ್ರ ಅಲ್ಫಾಝ್ ಅವರ ಹುಟ್ಟು ಹಬ್ಬವನ್ನು ಪೆರುವಾಯಿ ಗ್ರಾಮದ ಕಡಂಬಿಲ ಅಂಗನವಾಡಿ ಪುಟಾಣಿಗಳ ಜೊತೆ ಆಚರಿಸಲಾಯಿತು.
ಮಕ್ಕಳ ದಿನಾಚರಣೆಯಂದೇ ಅಲ್ಫಾಝ್ ಅವರ ಹುಟ್ಟು ಹಬ್ಬವಾಗಿದ್ದು ಅಂಗನವಾಡಿಯಲ್ಲಿ ಇತರ ಪುಟಾಣಿಗಳ ಜೊತೆ ಕೇಕ್ ಕತ್ತರಿಸಲಾಯಿತು. ಪುತ್ರನ ಹುಟ್ಟು ಹಬ್ಬ ಪ್ರಯುಕ್ತ ನಫೀಸಾ ಪೆರುವಾಯಿ ಅವರು ಅಂಗನವಾಡಿ ಪುಟಾಣಿಗಳಿಗೆ ಸಿಹಿ ತಿಂಡಿ ವಿತರಿಸಿದರು. ಅಲ್ಲದೇ ಬಹುಮಾನ ನೀಡಲು ನಗದು ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಪೆರುವಾಯಿ ಗ್ರಾ.ಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಮುರಳೀಧರ, ಅಂಗನವಾಡಿ ಶೀಕ್ಷಕಿ ಸರೋಜಿನಿ, ಸಹಾಯಕಿ ಸ್ವಾತಿ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಮತ್ತಿತರರು ಉಪಸ್ಥಿತರಿದ್ದರು.