ಎಸ್ಸೆಸ್ಸೆಲ್ಸಿ ಫಲಿತಾಂಶ: ಬೆಳ್ಳಾರೆ ಕೆಪಿಎಸ್ ವಿದ್ಯಾರ್ಥಿನಿ ಆಯಿಷ ಮುಶ್ಫಿಖ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಆಯಿಷ ಮುಶ್ಫಿಖ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಸಾಧನೆ ಮಾಡಿದ್ದಾರೆ.
ಇವರು ಮುಹಮ್ಮದ್ ಶರೀಫ್ ದಾರಿಮಿ ಮಾಡಾವು ಮತ್ತು ಫಾತಿಮತ್ ಝುಹ್‌ರ ಕಳಂಜ ದಂಪತಿಗಳ ಪುತ್ರಿ.
