ಕರಾವಳಿಕ್ರೈಂ

ಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

ಬೆಳ್ತಂಗಡಿ: ಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಘಟನೆ ಮೇ 3 ರಂದು ನಡೆದಿದೆ.

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಲತಾ ಎಂಬ ಮಹಿಳೆ ಮೇ.2ರಂದು ಆಂಧ್ರಪ್ರದೇಶದ ನೆಲ್ಲೂರುನಿಂದ ಬಾಡಿಗೆ ಇನ್ನೋವಾ ಕಾರಿನಲ್ಲಿ ಹೊರಟು ಮೇ.3ರಂದು ಸಂಜೆ 5 ಘಂಟೆಗೆ ಧರ್ಮಸ್ಥಳಕ್ಕೆ ತಲುಪಿರುತ್ತಾರೆ. ದೇವರ ದರ್ಶನಕ್ಕೆ ಹೋಗುವ ಮೊದಲು ಲತಾ ಅವರು ಕಾರ್ಯಕ್ರಮಕ್ಕೆಂದು ಜೊತೆಯಲ್ಲಿ ತಂದಿದ್ದ ಚಿನ್ನಾಭರಣಗಳಾದ ಬ್ರಾಸ್ ಲೈಟ್, ಚಿನ್ನದ ಚೈನ್, ನೆಕ್ಲಸ್ ನ್ನು ವ್ಯಾನಿಟಿಕ್ ಬ್ಯಾಗ್ ನ ಒಳಗಡೆ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಬ್ಯಾಗ್ ನಲ್ಲಿ ಇಟ್ಟುಕೊಂಡು ದೇವರ ದರ್ಶನವನ್ನು ಮುಗಿಸಿ ಹೊರಡುವ ಸಮಯದಲ್ಲಿ ಬ್ಯಾಗನ್ನು ನೋಡಿದಾಗ ವ್ಯಾನಿಟಿಕ್ ಬ್ಯಾಗಿನ ಜಿಪ್ಪು ತೆರೆದಿದ್ದು. ಬ್ಯಾಗ್ ನ ಒಳಗಡೆ ನೋಡಿದಾಗ ಬ್ಯಾಗ್ ನ ಒಳಗಡೇ ಪ್ಲಾಸ್ಟಿಕ್ ಬಾಕ್ಸಲ್ಲಿ ಇಟ್ಟಿದ್ದ 97 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿದ್ದು, ಒಟ್ಟು ಮೌಲ್ಯ ರೂ 6,79,000/- ಆಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!