ಐಪಿಎಲ್: ಸತತ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದ ರಿಯಾನ್ ಪರಾಗ್
ಕೆಕೆಆರ್ ವಿರುದ್ಧ ಮೇ.4ರಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಸತತ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ.

ಸ್ವಿನ್ನರ್ ಮೊಯಿನ್ ಅಲಿ ಅವರ 13ನೇ ಓವರ್ ನಲ್ಲಿ ಶಿಮ್ರಾನ್ ಹೆಟ್ಮೆಯರ್ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಪರಾಗ್ ಗೆ ಸ್ಟ್ರೈಕ್ ನೀಡಿದರು.
ನಂತರ ಕ್ರೀಸ್ ಗೆ ಬಂದ ರಿಯಾನ್ ಪರಾಗ್ ಮೈದಾನದ ಎಲ್ಲಾ ಕಡೆಗಳಿಗೆ ಸಿಕ್ಸರ್ ಎತ್ತುವ ಮೂಲಕ ಪರಾಕ್ರಮ ಮೆರೆದರು. ಮೊಯಿನ್ ಅಲಿ ಬೌಲಿಂಗ್ ನಲ್ಲಿ ಸತತ 5 ಸಿಕ್ಸ್ ಸಿಡಿಸಿದ ಬಳಿಕ ವರುಣ್ ಅವರ ಬೌಲಿಂಗ್ ನಲ್ಲಿ ಮೊದಲ ಎಸೆತವನ್ನು ಸಿಕ್ಸರ್ ಎತ್ತುವ ಮೂಲಕ ಸತತ ಆರು ಸಿಕ್ಸರ್ ಹೊಡೆದು ಅಬ್ಬರಿಸಿದರು.