ನದಿಯಲ್ಲಿ ಕಾಲು ಜಾರಿ ಬಿದ್ದು ಬೆಳ್ತಂಗಡಿಯ ಯುವಕ ಮೃತ್ಯು
ಬೆಳ್ತಂಗಡಿ: ನದಿ ನೀರಿನಲ್ಲಿ ಮುಳುಗಿ ಬೆಳ್ತಂಗಡಿಯ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಳಿ ಸಾಕಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ನಾವೂರು ಗ್ರಾಮದ ಕುದುರು ನಿವಾಸಿ ಮನ್ಸೂರ್ (19) ಮೃತ ಯುವಕ. ಮನ್ಸೂರ್ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆಗೆ ಟಿ.ನರಸೀಪುರ ತಾಲೂಕಿನ ಬನ್ನೂರುನಲ್ಲಿ ತಂಗಿದ್ದರು. ಬೆಳಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು, ಸ್ನಾನ ಮಾಡಲು ತೆರಳಿದ ಸಂದರ್ಭದಲ್ಲಿ ಮನ್ಸೂರ್ ಕಾಲು ಜಾರಿ ಬಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬನ್ನೂರು ಪೋಲಿಸರು ತೆರಳಿ ತನಿಖೆ ನಡೆಸಿದ್ದಾರೆ.