ಪ್ರಿಯತಮೆಯನ್ನು ಸೂಟ್ ಕೇಸ್ನಲ್ಲಿ ತುಂಬಿಸಿಕೊಂಡು ಹಾಸ್ಟೆಲ್ಗೆ ಬಂದ ವಿದ್ಯಾರ್ಥಿ!
ವಿದ್ಯಾರ್ಥಿಯೊಬ್ಬ ತನ್ನ ಪ್ರಿಯತಮೆಯನ್ನು ಸೂಟ್ ಕೇಸ್ನಲ್ಲಿ ತುಂಬಿಸಿಕೊಂಡು ಬಾಯ್ಸ್ ಹಾಸ್ಟೆಲ್ಗೆ ಬರುವಾಗ ಸಿಕ್ಕಿಬಿದ್ದಿರುವ ಘಟನೆಯೊಂದು ನಡೆದಿದೆ.

ಯುವತಿಯನ್ನು ಸೂಟ್ ಕೇಸ್ ನಲ್ಲಿ ತುಂಬಿಸಿಕೊಂಡು ಹುಡುಗರ ಹಾಸ್ಟೆಲ್ ಗೆ ಕರೆತರುವಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಹರ್ಯಾಣದಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಸೂಟ್ಕೇಸ್ನಿಂದ ಯುವತಿಯೊಬ್ಬಳು ಆಚೆ ಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ತನ್ನ ಗರ್ಲ್ ಫ್ರೆಂಡ್ ಳನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಹುಡುಗರ ಹಾಸ್ಟೆಲ್ ಗೆ ಬಂದಿದ್ದಾನೆ. ಹಾಸ್ಟೆಲ್ ಪ್ರವೇಶಿಸುತ್ತಲೇ ಸೂಟ್ ಕೇಸ್ ನೋಡಿದ ಭದ್ರತಾ ಸಿಬ್ಬಂದಿಗೆ ಅನುಮಾನ ಕಾಡಿದೆ.
ಇದೇ ವೇಳೆ ಸೂಟ್ ಕೇಸ್ ಅಲುಗಾಡಿದ್ದು ಕೂಡಲೇ ಸೆಕ್ಯುರಿಟಿ ಗಾರ್ಡ್ ಸೂಟ್ ಕೇಸ್ ಓಪನ್ ಮಾಡಲು ಹೇಳಿದ್ದಾರೆ. ಆರಂಭದಲ್ಲಿ ಆತ ಒಪ್ಪಿಲ್ಲವಾದರೂ ಬಳಿಕ ಅಲ್ಲಿದ್ದ ಸಿಬ್ಬಂದಿ ಸೂಟ್ ಕೇಸ್ ತೆರೆಯಲು ಪ್ರಯತ್ನಿಸಿದ್ದಾರೆ. ಬಳಿಕ ಸೂಟ್ ಕೇಸ್ ನಲ್ಲಿದ್ದ ಯುವತಿ ಹೊರ ಬರುತ್ತಲೇ ಸಿಬ್ಬಂದಿಗೆ ಶಾಕ್ ಆಗಿದೆ.
ವಿಚಾರವನ್ನು ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಹುಡುಗಿ ಅದೇ ವಿಶ್ವವಿದ್ಯಾಲಯದವಳೇ ಅಥವಾ ಹೊರಗಿನವಳೇ ಎಂಬುದು ಸ್ಪಷ್ಟವಾಗಿಲ್ಲ. ಕಾಲೇಜಿನ ಆಡಳಿತ ಮಂಡಳಿ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದೆ ಎನ್ನಲಾಗಿದೆ.
ಇನ್ನು ಸೂಟ್ ಕೇಸ್ ನಿಂದ ಯುವತಿ ಆಚೆ ಬರುತ್ತಿರುವುದನ್ನು ಇತರೆ ಹಾಸ್ಟೆಲ್ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.