ಪುತ್ತೂರು|ತಲವಾರು ಹಿಡಿದು ಫೋಸ್ ಕೊಟ್ಟು ವಾಟ್ಸಾಪ್ ಸ್ಟೇಟಸ್: ಇಬ್ಬರ ಬಂಧನ
ಪುತ್ತೂರು: ತಲವಾರು ಹಿಡಿದು ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪುತ್ತೂರು ತಾಲೂಕಿನ ಕುರಿಯದ ಕಟ್ಟದ ಬೈಲಿನ ಸುಜಿತ್, ಆರ್ಯಾಪು ಮರಿಕೆಯ ಪುಟ್ಟಣ್ಣ ಎಂದು ಗುರುತಿಸಲಾಗಿದೆ.
ಆರೋಪಿಗಳು ತಲವಾರು ಹಿಡಿದಿರುವ ಫೊಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ “ಟೈಮ್”ಎಂದು ಶೀರ್ಷಿಕೆ ಬರೆದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದರು. ಈ ಫೊಟೋ ಸಾಕಷ್ಟು ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ದ ಸುಮೊಟೋ ಕೇಸ್ ದಾಖಲಿಸಿ ಬಂಧಿಸಿದ್ದಾರೆ.