ಅಮೆರಿಕದ ಸುಂಕ ಹೇರಿಕೆಯಿಂದ ದೇಶದ ಆರ್ಥಿಕತೆಗೆ ಹೊಡೆತ: ರಾಹುಲ್ ಗಾಂಧಿ
ನವದೆಹಲಿ: ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತದ ರಫ್ತುಗಳ ಮೇಲಿನ ಅಮೆರಿಕದ ಸುಂಕ ಹೇರಿಕೆಯಿಂದ ದೇಶದ ಆರ್ಥಿಕತೆ ನಾಶವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಚೀನಾ ಭಾರತದ 4,000 ಚದರ ಕಿಲೋಮೀಟರ್ ಪ್ರದೇಶವನ್ನು ವಶಪಡಿಸಿಕೊಂಡಿದೆ ಮತ್ತು ಅಮೆರಿಕ ವಿಧಿಸುವ ಆಮದು ಸುಂಕಗಳು ಭಾರತದ ಆರ್ಥಿಕತೆಯನ್ನು “ಸಂಪೂರ್ಣವಾಗಿ ನಾಶಪಡಿಸುತ್ತದೆ”. ಈ ವಿಷಯಗಳ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಅಮೆರಿಕ ತನ್ನ ಹೊಸ ಪರಸ್ಪರ ವ್ಯಾಪಾರ ಕ್ರಮಗಳ ಅಡಿಯಲ್ಲಿ ಭಾರತೀಯ ರಫ್ತಿನ ಮೇಲೆ ಶೇ. 27 ಸುಂಕ ವಿಧಿಸಿಲು ನಿರ್ಧರಿಸಿದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.