ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸಾ ಪೆರವಾಯಿಗೆ ಪ್ರಜಾವಾಣಿ ಸಾಧಕಿ ಪ್ರಶಸ್ತಿ
ದಾವಣಗೆರೆಯಲ್ಲಿ ನಡೆದ ‘ಪ್ರಜಾವಾಣಿ ಸಾಧಕಿಯರು’ ಕಾರ್ಯಕ್ರಮದಲ್ಲಿ ಸಾಧಕಿ, ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸಾ ಪೆರವಾಯಿ ಅವರು ತಮ್ಮ ಸಾಧನೆಗೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಗ್ರಾ.ಪಂ ಕಸ ಸಂಗ್ರಹಿಸುವ ಸ್ವಚ್ಛ ವಾಹಿನಿ ವಾಹನಕ್ಕೆ ಚಾಲಕರು ಇಲ್ಲದ ವೇಳೆ ಗ್ರಾಪಂ ಉಪಾಧ್ಯಕ್ಷೆಯಾಗಿದ್ದ ನಫೀಸಾ ಅವರೇ ಸ್ವತಃ ಸ್ವಚ್ಛ ವಾಹಿನಿ ವಾಹನದ ಚಾಲಕಿಯಾಗಿ ಸೇವೆ ಸಲ್ಲಿಸುವ ಮೂಲಕ ಗ್ರಾಮದಲ್ಲಿ ಸ್ವಚ್ಛತೆ ವಿಚಾರವಾಗಿ ಪರಿಣಾಮಕಾರಿ ಕೆಲಸ ಮಾಡಿ ಸುದ್ದಿಯಾಗಿದ್ದರು.

ಪ್ರಸ್ತುತ ಪೆರುವಾಯಿ ಗ್ರಾಪಂ ಅಧ್ಯಕ್ಷರಾಗಿರುವ ನಫೀಸಾ ಅವರು ಸ್ವಚ್ಛತೆ ವಿಚಾರದಲ್ಲಿ ಈಗಲೂ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ.ನಫೀಸಾ ಜೊತೆಗೆ ಇತರ ಸಾಧಕಿಯರಾದ ಜಯಶ್ರೀ ಗುಳಗಣ್ಣನವರ, ರೂಪಾ ಎಂ.ವಿ, ರಕ್ಷಿತಾ ರಾಜು, ದಿವ್ಯಾ ಎಸ್.ಆರ್, ಲಲಿತಾ ರಘುನಾಥ್, ಸಂಗಮ್ಮ ಸಾಣಕ ಪರವಾಗಿ ಅವರ ಸೊಸೆ ಶ್ರೀದೇವಿ, ಸಬಿತಾ ಗುಂಡ್ಮಿ, ಜಲಜಾಕ್ಷಿ ಕೆ.ಡಿ, ಪ್ರಾಸ್ತಿ ಮೆಂಡನ್ ಪ್ರಶಸ್ತಿ ಸ್ವೀಕರಿಸಿದರು