ಕುಂಬ್ರ ಅರ್ಚನಾ ಕಾಂಪ್ಲೆಕ್ಸ್ ಮಾಲಕ ಬಾಬು ಪೂಜಾರಿ ಬಡಕ್ಕೋಡಿ ನಿಧನ
ಪುತ್ತೂರು : ಕುಂಬ್ರದಲ್ಲಿರುವ ಅರ್ಚನಾ ಕಾಂಪ್ಲೆಕ್ಸ್ ಮಾಲಕ, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿ (67ವ)ರವರು ಹೃದಯಾಘಾತದಿಂದ ಮಾ.16ರಂದು ಬೆಳಿಗ್ಗೆ ನಿಧನರಾದರು.

ಕುಂಬ್ರ ವರ್ತಕರ ಸಂಘದ ಸದಸ್ಯರಾಗಿ, ಕುಂಬ್ರ ವಿಶ್ವ ಯುವಕ ಮಂಡಲದ ಸದಸ್ಯರಾಗಿ, ಒಳಮೊಗ್ರು ಗ್ರಾಮದ ಹಿರಿಯ ಬಿಜೆಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಕುಂಬ್ರದಲ್ಲಿ ಹಲವು ವರ್ಷಗಳಿಂದ ಕಬ್ಬಿನ ಜ್ಯೂಸ್ ವ್ಯಾಪಾರಸ್ಥರಾಗಿ ‘ ಜ್ಯೂಸ್ ಬಾಬಣ್ಣ ‘ ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಸೀತಮ್ಮ, ಪುತ್ರರಾದ ಅಶೋಕ್ ಕುಮಾರ್, ಅನಿಲ್ ಕುಮಾರ್ ಹಾಗೂ ಪುತ್ರಿ ಅರ್ಚನಾ ಸೇರಿದಂತೆ ಅಪಾರ ಬಂಧು ಬಳಗವನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.