ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಮಿನಿಸ್ಟರ್ ಕೈವಾಡ ಆರೋಪದ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?
ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಗೆ ಸಂಬಂಧಿಸಿದಂತೆ ಮಿನಿಸ್ಟರ್ ಕೈವಾಡವಿದೆ ಎನ್ನುವುದು ಊಹಾಪೋಹ. ಎಲ್ಲ ಸತ್ಯ ತನಿಖೆಯಿಂದ ಹೊರಗೆ ಬರಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ರನ್ಯಾ ರಾವ್ ಕೇಸಲ್ಲಿ ಸಚಿವರು ಭಾಗಿಯಾಗಿರುವ ಆರೋಪಗಳು ಬಿಜೆಪಿಯವರ ಊಹಾಪೋಹ. ತನಿಖೆ ವೇಳೆ ಯಾರ ಕೈವಾಡವಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಇನ್ನು ಪ್ರಕರಣದಲ್ಲಿ ಆ ಮಿನಿಸ್ಟರ್ ಕೈವಾಡವಿದೆ. ಈ ಮಿನಿಸ್ಟರ್ ಕೈವಾಡವಿದೆ ಎನ್ನುವುದು ಊಹಾಪೋಹ ಎಂದು ಅವರು ಹೇಳಿದರು.