ದಾರಿ ಕೇಳುವ ನೆಪದಲ್ಲಿ ಚಿನ್ನದ ಉಂಗುರ ಕಸಿದು ಪರಾರಿ
ಪುತ್ತೂರು: ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ದಾರಿ ಕೇಳುವ ನೆಪದಲ್ಲಿ ಮನೆಯಂಗಳದಲ್ಲಿದ್ದ ವೃದ್ಧರೊಬ್ಬರ ಕೈಬೆರಳಲ್ಲಿದ್ದ ಚಿನ್ನದ ಉಂಗುರ ಕಸಿದು ಪರಾರಿಯಾದ ಘಟನೆ ಮಾ.11ರ ತಡರಾತ್ರಿ ಚಿಕ್ಕಮುಡ್ನರು ಗ್ರಾಮದ ರಾಗಿದಕುಮೇರು ಸಮೀಪ ನಡೆದಿದೆ.

ಸತೀಶ್ ಎಂಬವರ ಮನೆಯಲ್ಲಿ ಅವರ ಸಂಬಂಧಿಕರೊಬ್ಬರು ರಾತ್ರಿ ಸಿಟೌಟ್‌ನಲ್ಲಿ ಕುಳಿತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬರು ದಾರಿ ಕೇಳಿದ್ದು ವೃದ್ಧ ದಾರಿ ಹೇಳುವ ವೇಳೆ ಅವರ ಕೈ ಬೆರಳಲ್ಲಿದ್ದ ಚಿನ್ನದ ಉಂಗುರವನ್ನು ದೋಚಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ತೆರಳಿದ ಪೊಲೀಸರು ಮಾಹಿತಿ ಪಡೆದು ಕೊಂಡಿದ್ದಾರೆಂದು ತಿಳಿದು ಬಂದಿದೆ.