ಕರಾವಳಿರಾಜ್ಯರಾಷ್ಟ್ರೀಯ

ಶಿಹಾಬ್ ಚೊಟ್ಟೂರು ಪಾಕ್ ನೆಲದಲ್ಲಿ ನಡೆದಾಡಲು ಸಾಧ್ಯವೇ ಇಲ್ಲವೇ..?




ಕಳೆದ ನಾಲ್ಕು ತಿಂಗಳ ಹಿಂದೆ ಕೇರಳದಿಂದ ಕಾಲ್ನಡಿಗೆ ಮೂಲಕ ಪವಿತ್ರ ಹಜ್ ಯಾತ್ರೆ ಹೊರಟಿರುವ ಶಿಹಾಬ್ ಚೊಟ್ಟೂರು ಪಾಕಿಸ್ಥಾನದ ಗಡಿ ತಲುಪಿದ್ದಾರೆ. ಭಾರತದ ನೆಲದಲ್ಲಿ ಕಳೆದ 123 ದಿನಗಳಿಂದ ಸಾವಿರಾರು ಕಿ ಮೀ ಕಾಲ್ನಡಿಗೆಯಲ್ಲೇ ಯಾತ್ರೆ ನಡೆಸಿದ್ದಾರೆ. ಭಾರತದ ಮಣ್ಣಿನಲ್ಲಿ ಅವರು ನಡೆದಾಡುವ ವೇಳೆ ಅವರ ಜೊತೆ ಕೇರಳದಿಂದ ಕಾಶ್ಮೀರದ ತನಕ ಸಾವಿರಾರು ಮಂದಿ ಗೌರವಾಧರಗಳನ್ನು ನೀಡಿದ್ದಾರೆ. ಅವರು ನಡೆದಾಡುವ ಎಲ್ಲಾ ರಾಜ್ಯಗಳಲ್ಲಿಯೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪೊಲೀಸ್ ರಕ್ಷಣೆಯೂ ದೊರಕಿದೆ. ಆದರೆ ಎಲ್ಲಾ ಗೌರವಗಳನ್ನು ಮುಡಿಗೇರಿಸಿ ಭಾರತದ ನೆಲದಿಂದ ಪಾಕಿಸ್ಥಾನದ ನೆಲದಲ್ಲಿ ಅವರು ಹೆಜ್ಜೆ ಹಾಕಲು ಪಾಕ್ ವಿಸಾ ನಿರಾಕರಿಸುತ್ತಿದೆ.

ಒಂದು ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ಥಾನ ಭಾರತೀಯ ಮುಸ್ಲಿಂ ನಾಗರಿಕನಾದ ಶಿಹಾಬ್‌ಗೆ ಯಾವ ಕಾರಣಕ್ಕೆ ವಿಸಾ ನೀಡುತ್ತಿಲ್ಲ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಭಾರತೀಯ ಎಂಬ ಕಾರಣಕ್ಕೆ ದ್ವೇಷದಿಂದ ವಿಸಾ ನಿರಾಕರಣೆ ಮಾಡಿರುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ. ಪಾಕಿಸ್ಥಾನ ವಿಸಾ ನಿರಾಕರಿಸಿದ್ದೇ ಆದಲ್ಲಿ ಶಿಹಾಬ್ ಚೀನಾದ ಮೂಲಕ ತೆರಳಬಹುದಾದರೂ ಚೀನಾದವರೂ ವಿಸಾ ನಿರಾಕರಿಸುವ ಸಾಧ್ಯತೆ ದಟ್ಟವಾಗಿದೆ.

124 ದಿನ ಸಾವಿರಾರು ಕಿ ಮೀ ಕಾಲ್ನಡಿಗೆಯಲ್ಲೇ ತೆರಳಿದ ಶಿಹಾಬ್‌ನ ಪವಿತ್ರ ಹಜ್ ಯಾತ್ರೆಗೆ ಪಾಕಿಸ್ಥಾನ ಅಡ್ಡಿಪಡಿಸಿತೇ? ಅಡ್ಡಿಪಡಿಸಿದ್ದೇ ಆದರೆ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!