ಟೀಮ್ ಇಂಡಿಯಾ ವೇಗಿ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದು ಕೊಹ್ಲಿ
ದುಬೈ: ಟೀಂ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದಾಗ ಬೌಲರ್ ಮೊಹಮ್ಮದ್ ಶಮಿ ಅವರ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದು ಕೊಹ್ಲಿ ಗಮನ ಸೆಳೆದಿದ್ದಾರೆ.

ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅವರ ತಾಯಿ ಅಂಜುಮ್ ಅರಾ ನಡುವಿನ ಹೃದಯಸ್ಪರ್ಶಿ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಲಿನ ಗಾಯದಿಂದಾಗಿ ಒಂದು ವರ್ಷದ ವಿರಾಮದ ನಂತರ ತಮ್ಮ ಮಗ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದನ್ನು ವೀಕ್ಷಿಸಲು ಅಂಜುಮ್ ದುಬೈಗೆ ಬಂದಿದ್ದರು. ಪಂದ್ಯದ ನಂತರ ಕೊಹ್ಲಿ, ಶಮಿ ಅವರ ತಾಯಿಯನ್ನು ಭೇಟಿಯಾದರು. ಕೊಹ್ಲಿ ಭಾವುಕರಾಗಿ ಶಮಿ ಅವರ ತಾಯಿಯ ಬಳಿಗೆ ಬಂದು ಗೌರವದ ಸಂಕೇತವಾಗಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಶಮಿ ತಾಯಿ ಕೂಡ ಕೊಹ್ಲಿ ತಲೆ ಮುಟ್ಟಿ ಆಶೀರ್ವದಿಸಿದರು. ಈ ಭಾವುಕ ಕ್ಷಣದ ವೀಡಿಯೋ ವೈರಲ್ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಕೆಲ ದಿನಗಳ ಹಿಂದಷ್ಟೆ ಪಾಕ್ ತಂಡದ ಬೌಲರ್‌ನ ಶೂಲೇಸ್ ಕಟ್ಟುವ ಮೂಲಕ ಕೊಹ್ಲಿ ಸುದ್ದಿಯಲ್ಲಿದ್ದರು.