ನವ ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಿ ವಿದೇಶಕ್ಕೆ ವಾಪಸಾದ ಅಬ್ದುಲ್ ಅಝೀಝ್ ಪವಿತ್ರ ಅವರಿಗೆ ರಿಯಾದ್ ಏರ್ಪೋರ್ಟಿನಲ್ಲಿ ಸ್ವಾಗತ
ನವ ಕರ್ನಾಟಕ ರತ್ನ ಪುರಸ್ಕಾರ ಸ್ವೀಕರಿಸಿ ವಾಪಸಾದ ಅಬ್ದುಲ್ ಅಝೀಝ್ ಪವಿತ್ರ ಅವರಿಗೆ ರಿಯಾದ್ ಏರ್ಪೋರ್ಟಿನಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಬೆಂಗಳೂರು ರವೀಂದ್ರ ಕಲಾ ಕೇಂದ್ರದಲ್ಲಿ ಅ.4 ಮತ್ತು 5ರಂದು ನಡೆದ ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನದಲ್ಲಿ ನವ ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಿ ಬಂದ ಅಬ್ದುಲ್ ಅಝೀಝ್ ಪವಿತ್ರ ಅವರನ್ನು ರಿಯಾದಿನಲ್ಲಿರುವ ವಿವಿಧ ಸಂಘ ಸಂಸ್ಥೆ ನಾಯಕರು ಹಾಗೂ ಕಾಂಗ್ರೆಸ್ ನಾಯಕರು ಸೇರಿ ರಿಯಾದ್ ಕಿಂಗ್ ಖಾಲಿದ್ ಏರ್ಪೋರ್ಟಿನಲ್ಲಿ ಬರ ಮಾಡಿಕೊಂಡರು.