ಕ್ರೀಡೆರಾಷ್ಟ್ರೀಯ

ಟೀಂ ಇಂಡಿಯಾ ಬ್ಯಾಟ್ಸ್ ಮೆನ್  ಸರ್ಫರಾಜ್ ಖಾನ್ ತಂದೆಗೆ ಥಾರ್ ಉಡುಗೊರೆ ನೀಡಿದ ಮಹೀಂದ್ರಾ ಗ್ರೂಪ್ ನ ಮಾಲಕ ಆನಂದ್ ಮಹೀಂದ್ರಾ



ಭಾರತ ಟೆಸ್ಟ್ ಕ್ರಿಕೆಟ್ ತಂಡದ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಅವರ ತಂದೆ ನೌಶಾದ್ ಖಾನ್ ಅವರಿಗೆ ಮಹೀಂದ್ರಾ ಗ್ರೂಪ್ ನ ಮಾಲಕ ಆನಂದ್ ಮಹೀಂದ್ರಾ ಅವರು ತಮ್ಮ ಭರವಸೆಯಂತೆ ಥಾರ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಸರ್ಫರಾಜ್ ಟೆಸ್ಟ್ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡುತ್ತಿದ್ದಂತೆ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು, ಸರ್ಫರಾಜ್ ಅವರ ತಂದೆಗೆ ಮಹೀಂದ್ರ ಥಾರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದರು.

ಭಾರತವನ್ನು ಪ್ರತಿನಿಧಿಸುವ ತನ್ನ ಕನಸನ್ನು ನನಸಾಗಿಸಲು ತಂದೆ ನೌಶಾದ್ ಅವರ ತ್ಯಾಗ ಕಾರಣ ಎಂದು ಸರ್ಫರಾಜ್ ಖಾನ್ ಈ ಹಿಂದೆ ಹೇಳಿದ್ದರು.

ನೌಶಾದ್ ಅವರು ತಮ್ಮ ಮಕ್ಕಳಾದ ಸರ್ಫ್ರಾಜ್‌ ಹಾಗೂ ಮುಶೀರ್‌ ಅವರೊಂದಿಗೆ ಥಾರ್‌ ಕಾರ್‌ ಸ್ವೀಕರಿಸಿದ್ದು ಇದರ ಮಾಹಿತಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!