ನೇರೋಳ್ತಡ್ಕದಲ್ಲಿ ಕುಡಿಯುವ ನೀರಿನ ಸಮಸ್ಯೆ: ಸ್ಥಳೀಯರಿಂದ ಪ್ರತಿಭಟನೆ
ಪುತ್ತೂರು: ಕಳೆದ ಮೂರು ತಿಂಗಳಿನಿಂದ ನೀರಿನ ಸಮಸ್ಯೆ ಇದ್ದರೂ ಗ್ರಾಮ ಪಂಚಾಯತ್ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸರ್ವೆ ಗ್ರಾಮದ ನೇರೋಳ್ತಡ್ಕ ನಿವಾಸಿಗಳು ಪ್ರತಿಭಟನೆ ನಡೆಸಿದ ಘಟನೆ ಫೆ.17ರಂದು ನಡೆದಿದೆ.

ನೇರೋಳ್ತಡ್ಕ ಪರಿಸರದ ಸುಮಾರು 50 ಮನೆಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದು ಇರುವ ಒಂದು ಬೋರ್ ವೆಲ್ ನ ನೀರು ಕುಡಿಯಲು ಅಯೋಗ್ಯ ಎಂದು ಲ್ಯಾಬ್ ವರದಿ ಬಂದಿದ್ದರೆ ಇನ್ನೊಂದು ಬೋರ್ ವೆಲ್ ನಲ್ಲಿ ನೀರು ಖಾಲಿಯಾಗಿದೆ. ಈ ಹಿನ್ನಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ತುರ್ತಾಗಿ ಹೊಸ ಬೋರ್ ವೆಲ್ ಕೊರೆಯುವುದೇ ಇಲ್ಲಿನ ಸಮಸ್ಯೆಗೆ ಪರಿಹಾರ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸ್ಥಳೀಯ ಗ್ರಾಪಂ ಸದಸ್ಯರು, ಮಹಿಳೆಯರು ಸೇರಿದಂತೆ ಹಲವರು ಇದ್ದರು.