ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ನೇರಳಕಟ್ಟೆಯಲ್ಲಿ ಶುಭಾರಂಭ
ಪುತ್ತೂರು: ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ಡಿ.8ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ಸಯ್ಯದ್ ಹಂಝ ತಂಙಳ್ ಶೋರೂಂ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಭಾರತ್ ವೆಹಿಕಲ್ ಬಜಾರ್ ಸಂಸ್ಥೆ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ 2ನೇ ವರ್ಷಾಚರಣೆ ಹಾಗೂ ಐಕ್ಯ ವೇದಿಕೆ ಕೊಡಾಜೆ ಇದರ ಜಂಟಿ ಸಹಭಾಗಿತ್ವದಲ್ಲಿ ಡ್ರಗ್ಸ್ ವಿರುದ್ದ ಜನಜಾಗೃತಿ, ಸಾಧಕರಿಗೆ ಸನ್ಮಾನ ಹಾಗೂ ರಸ ಮಂಜರಿ ಕಾರ್ಯಕ್ರಮ ಇಂದು(ಡಿ.8) ಗಂಟೆ 6.30ರಿಂದ ನಡೆಯಲಿದೆ.