ವಿಜ್ಞಾನ

ವಾಟ್ಸಪ್‌ನಲ್ಲಿ ನಿಮಗೆ ತಿದಿರಬೇಕಾದ ಮೂರು ಅದ್ಭುತ ಸೆಟ್ಟಿಂಗ್ಸ್

ಪ್ರತಿ ವಾಟ್ಸಾಪ್ ಬಳಕೆದಾರರು ಪ್ರತಿದಿನ ವಾಟ್ಸಾಪ್ ಬಳಸಿದರೂ, ಎಲ್ಲಾ ಸೆಟ್ಟಿಂಗ್ಗಳ ಬಗ್ಗೆ ಎಲ್ಲರಿಗೂ ಪರಿಚಯವಿಲ್ಲ. ನಿಮಗೆ ವಾಟ್ಸಾಪ್ ಅನುಭವವನ್ನು ಸುಲಭವಾಗಿಸುವ ಮೂರು ಸೂಪರ್ ಸೆಟ್ಟಿಂಗ್ಗಳು

1. ಮೆಟಾ ಎಐ (Meta AI):
ಮೆಟಾ ಎಐ ವಾಟ್ಸಾಪ್‍ನಲ್ಲಿ ಹೊಸದಾಗಿ ಪರಿಚಯವಾಗಿದೆ. ಇದು ಒಬ್ಬ ಸಹಾಯಕನಂತಿದ್ದು, ನೀವು ಯಾವುದೇ ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸುತ್ತದೆ. ಉದಾಹರಣೆಗೆ, “ನಾಳೆ ಹವಾಮಾನ ಹೇಗಿದೆ?” ಅಥವಾ “ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ಬೇಕು” ಎಂದರೆ, ಮೆಟಾ ಎಐ ನಿಮಗೆ ತಕ್ಷಣ ಉತ್ತರ ನೀಡುತ್ತದೆ. ಇದು ನಿಮ್ಮ ಚಾಟ್‌ಗಳಲ್ಲಿ ಸಹಾಯ ಮಾಡುತ್ತಾ, ಹೆಚ್ಚಿನ ಮಾಹಿತಿಯನ್ನು ನಿಮ್ಮ ಕೈತುಂಬಾ ಒದಗಿಸುತ್ತದೆ. ಇದು ನಿಮಗೆ ಸಮಯ ಉಳಿಸಲು ಸಹಾಯ ಮಾಡುತ್ತದೆ ಮತ್ತು ನೀವು ಕೇಳುವ ಪ್ರಶ್ನೆಗಳ ಬಗ್ಗೆ ಚುರುಕಾಗಿ ಕೆಲಸ ಮಾಡುತ್ತದೆ.

2. ಡಾರ್ಕ್ ಮೋಡ್ (Dark Mode):
ಕಣ್ಣುಗಳಿಗೆ ತಣಿವ ದೃಷ್ಯಾನುಭವ ನೀಡುವ ಡಾರ್ಕ್ ಮೋಡ್ ಅನ್ನು ನೀವು ಬಳಸಬಹುದು. ಇದು ವಿಶೇಷವಾಗಿ ರಾತ್ರಿ ಸಮಯದಲ್ಲಿ ವಾಟ್ಸಾಪ್ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಸೆಟ್ಟಿಂಗ್ಸ್ > ಚಾಟ್‍ಗಳು > ಥೀಮ್ > ಡಾರ್ಕ್ ಮೋಡ್ ಆಯ್ಕೆ ಮಾಡಿ, ನಿಮ್ಮ ವಾಟ್ಸಾಪ್ ಅನ್ನು ಹೆಚ್ಚು ಆಕರ್ಷಕ ಮತ್ತು ಸೌಲಭ್ಯಯುಕ್ತವಾಗಿ ಮಾಡಬಹುದು.

3.  2-ಹಂತದ ಪರಿಶೀಲನೆ (Two-Step Verification):
ನಿಮ್ಮ ವಾಟ್ಸಾಪ್ ಖಾತೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು 2-ಹಂತದ ಪರಿಶೀಲನೆ ಅತ್ಯಗತ್ಯ. ಇದು ನಿಮ್ಮ ಖಾತೆಗೆ ಹೆಚ್ಚುವರಿಯ ಸುರಕ್ಷತೆಯನ್ನು ನೀಡುತ್ತದೆ. ಸೆಟ್ಟಿಂಗ್ಸ್ > ಖಾತೆ > 2-ಹಂತದ ಪರಿಶೀಲನೆ ಆಯ್ಕೆ ಮಾಡಿ, ಒಂದು ಪಿನ್ ರಚಿಸಿ. ಈ ಮೂಲಕ, ನಿಮ್ಮ ಖಾತೆಯ ಮೇಲೆ ಅವಾಂತರಗಳ ಆಗಮನವನ್ನು ತಡೆಯಬಹುದು.

ಈ ಮೂರು ಸೆಟ್ಟಿಂಗ್ಗಳನ್ನು ಬಳಸುವುದರಿಂದ, ನೀವು ವಾಟ್ಸಾಪ್ ಅನ್ನು ಹೆಚ್ಚು ಸುಧಾರಿತವಾಗಿ ಹಾಗೂ ಸುರಕ್ಷಿತವಾಗಿ ಬಳಸಬಹುದು.

Leave a Reply

Your email address will not be published. Required fields are marked *

error: Content is protected !!