ಟೆನಿಸ್’ಗೆ ರೋಜರ್ ಫೆಡರರ್ ಕಣ್ಣೀರ ವಿದಾಯ
ಲಂಡನ್: ಸ್ವಿಸ್ ಟೆನಿಸ್ ಸ್ಟಾರ್ ರೋಜರ್ ಫೆಡರರ್ ಸೆ.23ರಂದು ATP ಟೂರ್ ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ತನ್ನ ದೀರ್ಘಕಾಲದ ಎದುರಾಳಿ, 22 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯ ಒಡೆಯ ರಫೆಲ್ ನಡಾಲ್ ಅವರೊಂದಿಗೆ ಲೇವರ್ ಕಪ್ 2022 ರ ಡಬಲ್ಸ್ ಪಂದ್ಯದಲ್ಲಿ ಆಡಿದರು.
ಪಂದ್ಯದ ನಂತರದ ಸಂದರ್ಶನದಲ್ಲಿ ಫೆಡರರ್ ಕಣ್ಣೀರು ಹಾಕಿದರು. ತನ್ನ ಕೊನೆಯ ವೃತ್ತಿಪರ ಪಂದ್ಯದ ನಂತರ ಪ್ರೆಸೆಂಟರ್‌ನೊಂದಿಗೆ ಮಾತನಾಡುವಾಗ ಫೆಡರರ್ ಭಾವೋದ್ವೇಗಕ್ಕೆ ಒಳಗಾದರು.
ಫೆಡರರ್ ಮಾತನ್ನು ಕೇಳುತ್ತಿದ್ದ ನಡಾಲ್‌ಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ಇಬ್ಬರೂ ಅಕ್ಕಪಕ್ಕದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿರುವ ದೃಶ್ಯವೂ ಕಂಡುಬಂತು.