ಶಾಂತಿನಗರ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮಸೋತ್ಸವ ಪ್ರಯುಕ್ತ ಮಾಹಿತಿ ಕಾರ್ಯಕ್ರಮ
ಪುತ್ತೂರು: ಶಾಂತಿನಗರ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮಾಸೋತ್ಸವ ಪ್ರಯುಕ್ತ ಶಿಕ್ಷಣ ಕೇಂದ್ರಗಳ ಒಕ್ಕೂಟ ದ.ಕ ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು, ಇದರ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನ.27ರಂದು ನಡೆಯಿತು. ವಿದ್ಯಾರ್ಥಿಗಳು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು,
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾರದ ರಫೀಕ್ ದರ್ಬೆ ಮಾತನಾಡಿ ಮಕ್ಕಳ ಆರೋಗ್ಯ, ದಿನನಿತ್ಯದ ಚಿಂತನೆ ಮತ್ತು ಕರ್ತವ್ಯಗಳ ಬಗ್ಗೆ ವಿವರಣೆ ನೀಡಿದರು.
ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷರಾದ ರೋಹಿಣಿ ಪಿ ಮಾತನಾಡಿ ದಿನನಿತ್ಯದ ಸುಚಿತ್ವದಲ್ಲಿ ನಮ್ಮ ಪಾತ್ರ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನೀರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರೇಖಾ, ಮೀನಾಕ್ಷಿ, ಉಷಾ, ಗೌರವ ಶಿಕ್ಷಕಿ ಕೌಸರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರುಗಳಾದ ಜಸಿಂತ ಆನ್ಸಿ ಮೆನೆಜಸ್ ರವರು ಸ್ವಾಗತಿಸಿದರು. ಶಿಕ್ಷಕಿ ತಿಲಕ್ ವಂದಿಸಿದರು.