ಸುಳ್ಯ: ಅನ್ಸಾರಿಯ ಗಲ್ಫ್ ಆಡಿಟೋರಿಯಂಗೆ ಸುಳ್ಯ ಠಾಣಾ ಎಸ್ ಐ ಸಂತೋಷ್, ಸಾಮಾಜಿಕ ಮುಖಂಡ ಎಂ.ಬಿ ಸದಾಶಿವ ಭೇಟಿ
ಸುಳ್ಯ: ನ.29ರಂದು ಉದ್ಘಾಟನೆಗೊಳ್ಳಲಿರುವ ಅನ್ಸಾರಿಯಾ ಗಲ್ಫ್ ಆಡಿಟೋರಿಯಂಗೆ ಸುಳ್ಯ ಠಾಣಾ ಎಸ್ ಐ ಸಂತೋಷ್ ಬಿ ಪಿ ಹಾಗೂ ಸುಳ್ಯ ಸಾಂದೀಪ ಶಾಲಾ ಸಂಚಾಲಕರು ಸಾಮಾಜಿಕ ಮುಖಂಡ ಎಂ ಬಿ ಸದಾಶಿವ ರವರು ಭೇಟಿ ನೀಡಿ ಆಡಿಟೋರಿಯಂ ಕಟ್ಟಡ ವೀಕ್ಷಣೆ ನಡೆಸಿದರು.
ಎಸ್ ಐ ಸಂತೋಷ್ ರವರು ನಾಳೆಯ ಕಾರ್ಯಕ್ರಮದ ಬಗ್ಗೆ ಸಂಘಟಕರು ಆಯೋಜನೆ ಮಾಡಿರುವ ಸ್ಥಳ ಪರಿಶೀಲನೆ ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸಂಸ್ಥೆಯ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಪಡೆದುಕೊಂಡು ಶ್ಲಾಘನೆ ವ್ಯಕ್ತಪಡಿಸಿದರು.