ಸುಳ್ಯ: ಅನ್ಸಾರಿಯ ಗಲ್ಫ್ ಆಡಿಟೋರಿಯಂ ಉದ್ಘಾಟನೆ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಉಪಹಾರ ವ್ಯವಸ್ಥೆ: ಗಮನ ಸೆಳೆಯುತ್ತಿರುವ ತಟ್ಟುಕಡ
ಸುಳ್ಯ: ನ.29ರಂದು ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭಕ್ಕೆ ಭಾಗವಹಿಸುವ ಸಾರ್ವಜನಿಕರಿಗೆ ಉಚಿತ ಚಾ, ತಿಂಡಿ ವ್ಯವಸ್ಥೆಗೆ ಸೂಕುಲ್ ಅನ್ಸಾರ್ ತಾತ್ಕಾಲಿಕ ತಟ್ಟುಕಡವನ್ನು ಸ್ಥಳೀಯ ಯುವಕರ ತಂಡ ಕೆಲವೇ ಘಂಟೆಗಳಲ್ಲಿ ನಿರ್ಮಿಸಿ ಸಿದ್ಗೊಳಿಸಿದೆ.
ಬಿದಿರು, ಓಲೆ, ತೆಂಗಿನ ಗರಿ, ಮುಂತಾದ ಕಚ್ಚಾ ವಸ್ತುಗಳಿಂದ ಯುವಕರು ಕೆಲವೇ ಸಮಯದಲ್ಲಿ ಸುಂದರ ತಟ್ಟುಕಡ ನಿರ್ಮಿಸಿದ್ದು ಅದಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ.