ಕರಾವಳಿ

ಕಾಂತಾರ ಚಿತ್ರದ ಕಲಾವಿದರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿ; ಹಲವು ಮಂದಿಗೆ ಗಾಯ

ಕೊಲ್ಲೂರು: ಕಾಂತಾರ ಚಿತ್ರದ ಜ್ಯೂನಿಯರ್ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಪಲ್ಟಿಯಾದ ಪರಿಣಾಮ ಹಲವು ಮಂದಿ‌ ಗಾಯಗೊಂಡ ಘಟನೆ ಕೊಲ್ಲೂರು ಸಮೀಪದ ಜಡ್ಕಳ್ ಎಂಬಲ್ಲಿ ನಡೆದಿದೆ.

ಹಾಲ್ಕಲ್‌ನ ಆನೆಝರಿ ಎನ್ನುವಲ್ಲಿ ಕಾಂತಾರ-1 ಚಿತ್ರ ತಂಡದ ವಾಹನಕ್ಕೆ ಸ್ಕೂಟರ್‌ ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸುವ ಭರದಲ್ಲಿ ವಾಹನ ರಸ್ತೆ ಪಕ್ಕಕ್ಕೆ ಸರಿದ ಘಟನೆ ರವಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಸಂಭವಿಸಿದೆ.

ಇದರಿಂದ 6 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇವರೆಲ್ಲ ಜಡ್ಕಲ್ ಮತ್ತು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!