ನ.16ರಂದು ಶಾಸಕ ಅಶೋಕ್ ರೈ ಕಚೇರಿಯಲ್ಲಿ ಬೃಹತ್ ಉದ್ಯೋಗ ಮೇಳ
ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಅವರ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ನ.16 ರಂದು ಶನಿವಾರ ಶಾಸಕರ ಕಚೇರಿಯಲ್ಲಿ ಬೃಹತ್ ಉದ್ಗಯೋಗ ಮೇಳ ನಡೆಯಲಿದ್ದು ಸುಮಾರು 200 ಮಂದಿ ಯನ್ನು ನೇರ ಸಂದರ್ಶನದ ಮೂಲಕ ವಿವಿಧ ಸಂಸ್ಥೆಗಳು ಆಯ್ಕೆ ಮಾಡಲಿದೆ.
ಪುತ್ತೂರಿನಲ್ಲಿರುವ ವಿದ್ಯಾವಂತ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಶಾಸಕರು ಈಗಾಗಲೇ ವಿವಿಧ ಸಂಶ್ಥೆಗಳ ಜೊತೆ ಮಾತುಕತೆ ನಡೆಸಿದ್ದರ ಪರಿಣಾಮವಾಗಿ ವಿವಿಧ ಕಂಪೆನಿಗಳು ಪುತ್ತೂರಿನಲ್ಲಿಯೇ ಸಂದರ್ಶನ ನಡೆಸಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಪುತ್ತೂರಿನಲ್ಲಿ ಪ್ರಥಮ ಬಾರಿ ಎಂಬಂತೆ ಈ ರೀತಿಯ ಉದ್ಯೋಗ ಮೇಳ ನಡೆಯುತ್ತಿದ್ದು ಸ್ಥಳೀಯ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸುತ್ತಿದೆ. ಸುಮಾರು 200 ಮಂದಿ ವಿವಿಧ ಹುದ್ದೆಗಳಿಗೆ ಕಂಪೆನಿ ಆಯ್ಕೆ ಮಾಡಿಕೊಳ್ಳಲಿದೆ.
ಹುದ್ದೆಗಳು: ಸಿವಿಲ್ ಸೈಟ್ ಮೇಲ್ವಿಚಾರಕ, ಕೃಷಿ ಮೇಲ್ವಿಚಾರಕ, ವಿಭಾಗ ಮೇಲ್ವಿಚಾರಕ, ಬಿಲ್ಲಿಂಗ್, ಇಂಜನಿಯರ್, ಇಲೆಕ್ಟ್ರಾನಿಕ್ಸ್, ಕ್ಯೂಸಿ ಚೆಕ್ಕರ್, ಸುಪರ್‌ವೈಸರ್, ಸೇಲ್ಸ್ ವಿಭಾಗ, ಫುಡ್‌ಕೋರ್ಟು, ವೆಲ್ಡರ್, ಮತ್ತು ಲೇಬರ‍್ಸ್ ಗಳನ್ನು ಆಯ್ಕೆ ಮಾಡಲಿದ್ದಾರೆ. ಉತ್ತಮ ವೇತನ ಸೌಲಭ್ಯವಿರುತ್ತದೆ.
ವಿದ್ಯಾರ್ಹತೆ : 7 ನೇ ತರಗತಿ, 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಬಿ ಇ ಸಿವಿಲ್, ಬಿಎಸ್ಸಿ ಅಗ್ರಕಲ್ಚರ್ ವಿದ್ಯಾರ್ಹತೆ ಹೊಂದಿದವರು ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತರು ನ.16 ರಂದು ಬೆಳಿಗ್ಗೆ 9.30 ರಿಂದ ಶಾಸಕ ಅಶೋಕ್ ರೈಗಳ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಉದ್ಯೋಗಾಂಕ್ಷಿಗಳು ತಮ್ಮ ಬಯೋಡಟಾದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಮನವಿ ಮಾಡಿದ್ದಾರೆ.