ಪುತ್ತೂರಿನಲ್ಲಿ ಹೊಸ ದಾಖಲೆ ಬರೆದ ವಸ್ತ್ರ ವಿತರಣಾ ಸಮಾರಂಭ
ಪುತ್ತೂರು: ಪುತ್ತೂರಿನಲ್ಲಿ ನವೆಂಬರ್ 2ರಂದು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ವಸ್ತ್ರದಾನ ಸಮಾರಂಭ ಹೊಸ ದಾಖಲೆ ನಿರ್ಮಿಸಿದೆ.
ಬರೋಬ್ಬರಿ 85,976 ಮಂದಿಗೆ ವಸ್ತ್ರ ವಿತರಿಸಲಾಗಿದೆ. 20 ವಸ್ತ್ರ ವಿತರಣೆ ಕೌಂಟರ್ ತೆರೆಯಲಾಗಿದ್ದು ವ್ಯವಸ್ಥಿತವಾಗಿ ವಸ್ತ್ರ ವಿತರಣೆ ನಡೆದಿದೆ. 20 ಊಟದ ಕೌಂಟರ್ ಮೂಲಕ ಆಗಮಿಸಿದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ತುಂಬಿ ತುಳುಕುತ್ತಿದ್ದ ಜನಸಾಗರದ ಮಧ್ಯೆಯೂ ಸ್ವಯಂ ಸೇವಕರು ಎಲ್ಲವನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದ್ದು ವಿಶೇಷವಾಗಿತ್ತು.